More

    ಕಲ್ಯಾಣಿ ಭರ್ತಿ, ಕೆರೆ ಏರಿ ಕುಸಿತ: ಕಲ್ಯಾಣಿಯಿಂದ ನೀರು ಹೊರಬಿಟ್ಟ ಅಧಿಕಾರಿಗಳು

    ಚಳ್ಳಕೆರೆ: ಈಚೆಗೆ ಸುರಿದ ಮಳೆಯಿಂದ ಭರ್ತಿಯಾಗಿ ಏರಿ ಒಡೆಯುವ ಹಂತದಲ್ಲಿದ್ದ ತಾಲೂಕಿನ ರಾಮಜೋಗಿಹಳ್ಳಿ ಸಮೀಪದ ಊರಗಟ್ಟೆ ಕೆರೆಯಿಂದ ನೀರನ್ನು ಸೋಮವಾರ ಹೊರ ಬಿಡಲಾಯಿತು.

    ಗ್ರಾಮದಲ್ಲಿ 60 ಅಡಿ ಆಳದ ಕಲ್ಯಾಣಿ ಇದೆ. ಮಳೆಯಿಂದ ಇದು ಭರ್ತಿಯಾಗಿ ನೀರು ಸಮೀಪದ ಊರಗಟ್ಟೆ ಏರಿಗೂ ಹರಿದ ಪರಿಣಾಮ ಕೋಡಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿತ್ತು.

    ಈ ವಿಷಯ ತಿಳಿದ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಪಿಆರ್‌ಡಿ ಇಲಾಖೆ ಸೆಕ್ಷನ್ ಆಫೀಸರ್ ಎಂ.ಎಸ್.ಮುಜೀಬುರ್ ರೆಹಮಾನ್, ಪಿಡಿಒ ಎಂ.ನಾಗರಾಜಪ್ಪ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

    ಬಳಿಕ ಜೆಸಿಬಿ ಬಳಸಿ ಅಧಿಕವಾಗಿ ಸಂಗ್ರಹವಾಗಿದ್ದ ನೀರನ್ನು ಕೆರೆಯಿಂದ ಹೊರಬಿಡುವ ಕೆಲಸ ಮಾಡಲಾಯಿತು. ಕುಸಿದು ಬಿದ್ದಿರುವ ಕೆರೆ ಕಟ್ಟೆಯನ್ನು ಮರಳು ಚೀಲಗಳ ಗೋಡೆ ಕಟ್ಟಿ ರಕ್ಷಣೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ತಹಸೀಲ್ದಾರರು ಸೂಚಿಸಿದರು.

    ಅಂತರ್ಜಲ ವೃದ್ಧಿ: ಕಲ್ಯಾಣಿಯಲ್ಲಿ ನೀರು ಭರ್ತಿಯಾದರೆ ಗ್ರಾಮದ 2 ಸಾವಿರ ಮಂದಿಗೆ ಕುಡಿಯುವ ನೀರಿಗೆ ಆಧಾರವಾಗಿರುವ 8 ಮತ್ತು ಜಮೀನುಗಳ ಕೊಳವೆಬಾವಿಗಳ ಅಂತರ್ಜಲ ಅಭಿವೃದ್ಧಿಗೆ ಆಧಾರವಾಗಿದೆ.

    ಸ್ಥಳೀಯ ಪಂಚಾಯಿತಿಯಿಂದ 2018ರಲ್ಲಿ ಕಲ್ಯಾಣಿಯಲ್ಲಿ ಹೂಳು ತೆಗೆಸಲಾಗಿತ್ತು. ಇದರಿಂದ ನೀರಿನ ಸಂಗ್ರಹವಾಗಿದೆ. ಈ ವರ್ಷ ಅಧಿಕ ಮಳೆಯಾದ ಪರಿಣಾಮ ಕಲ್ಯಾಣಿ ತುಂಬಿ ಹರಿಯುತ್ತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts