More

    ಕೆರೆ ಇಲ್ಲವಾದರೆ ಜೀವ ಸಂಕುಲ ಸರ್ವನಾಶ

    ಚಿಕ್ಕಮಗಳೂರು: ಯಾವ ಕಾರಣಕ್ಕೂ ಕೆರೆಗಳನ್ನು ಒತ್ತುವರಿ ಮಾಡಬಾರದು. ಕೆರೆ ಇಲ್ಲವಾದರೆ ಜೀವ ಸಂಕುಲ ಸರ್ವನಾಶವಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ಹೇಳಿದರು.

    ಉಪ್ಪಳ್ಳಿ ಗ್ರಾಮದ ಹೊಯ್ಸಳ ಕೆರೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೊಯ್ಸಳ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಹೂಳೆತ್ತುವ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

    ಹಳ್ಳಿಗಳಲ್ಲಿ ಸಾಕಷ್ಟು ಕೆರೆಗಳನ್ನು ಮುಚ್ಚಿ ಒತ್ತುವರಿ ಮಾಡಲಾಗಿದೆ. ಸಣ್ಣ ಕಲ್ಯಾಣಿ, ಕೆರೆಗಳು ಕಣ್ಮರೆಯಾದರೆ ಪ್ರಾಣಿ ಪಕ್ಷಿಗಳು ಬದುಕುವುದು ಕಷ್ಟ. ಪ್ರಪಂಚದ ಎಲ್ಲ ಸಂಸ್ಕೃತಿ, ನಾಗರಿಕತೆ ಬೆಳೆದಿರುವುದು ನದಿ ಬಯಲುಗಳಲ್ಲಿ. ಆದ್ದರಿಂದ ಎಲ್ಲ ಕೆರೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

    ಕೆರೆ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜತೆ ಚಿಂತನೆ ನಡೆಸಿದ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಕೆರೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಧರ್ಮಸ್ಥಳದ ಧರ್ವಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ 6 ಲಕ್ಷ ರೂ. ನೆರವು ಒದಗಿಸಿದ್ದಾರೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಕೆರೆ ಅಭಿವೃದ್ಧಿಗೆ ನೆರವಾಗುವುದರ ಜತೆಗೆ ಅಂತರ್ಜಲ ಹೆಚ್ಚಿಸಲು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts