More

    ಚೀನಾ ಲಡಾಖ್​ ಜನತೆಯ ಭೂಮಿ ಕಸಿದುಕೊಂಡಿದೆಯಾ? ಹೌದು ಎನ್ನೋದು ರಾಹುಲ್​ ಗಾಂಧಿ ಮಾತು

    ನವದೆಹಲಿ: ಚೀನಾ ತನ್ನ ಗಡಿ ಭಾಗಕ್ಕೆ ಅಂಟಿಕೊಂಡಿರುವ ಲಡಾಖ್​ನ ಜನತೆಯನ್ನು ಹೆದರಿಸಿ ಬೆದರಿಸಿ ಅವರ ಭೂಮಿಗಳನ್ನು ಕಿತ್ತುಕೊಂಡಿದೆ. ಇವರ ಬೆದರಿಕೆಗೆ ಮಣಿದು ಕೆಲವರು ಭೂಮಿ, ಮನೆಗಳನ್ನು ತೊರೆದು ನಗರಗಳಿಗೆ ವಲಸೆ ಹೋಗಿದ್ದಾರೆ. ಇನ್ನಾದರೂ ಅವರ ಎಚ್ಚರಿಕೆಯ ಮಾತುಗಳನ್ನು ಆಲಿಸಿ. ಇಲ್ಲವಾದಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

    ಚೀನಿಯರು ಲಡಾಖಿಗಳ ಭೂಮಿಯನ್ನು ಕಸಿದುಕೊಂಡಿರುವ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನೂ ಅವರು ಉಲ್ಲೇಖಿಸಿದ್ದಾರೆ.
    ದೇಶಭಕ್ತ ಲಡಾಖ್​ ಜನತೆ ಚೀನಾದ ಅತಿಕ್ರಮಣದ ಬಗ್ಗೆ ಧ್ವನಿಎತ್ತುತ್ತಿದ್ದಾರೆ. ಅವರು ಗಟ್ಟಧ್ವನಿಯಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿದ್ದಾರೆ. ಇದನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಹುಲ್​ ಗಾಂಧಿ ಹೇಳಿದರು.

    ಇದನ್ನೂ ಓದಿ: ಕ್ಸಿ ಜಿನ್​ಪಿಂಗ್​ ಪ್ರವಾಸವನ್ನು ರದ್ದುಗೊಳಿಸಿದರೇ ಶಿನ್ಜೋ ಅಬೆ?

    ಇದಕ್ಕೆ ಧ್ವನಿಗೂಡಿಸಿರುವ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಲಡಾಖ್​ ನಿವಾಸಿಗಳು ತಮ್ಮ ತಮ್ಮ ತಾಯಿ ನಾಡನ್ನು ತುಂಬಾ ಪ್ರೀತಿಸುತ್ತಾರೆ. ಚೀನಾದವರು ಅವರೆಲ್ಲರ ಭೂಮಿಯನ್ನು ಅತಿಕ್ರಮಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ತಾಯಿ ನಾಡಿನ ರಕ್ಷಣೆ ಹಾಗೂ ಒಟ್ಟಾರೆ ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರ ಭಾವುಕ ಲಡಾಖಿಗಳ ಮಾತುಗಳನ್ನು ಆಲಿಸುವ ನಿರೀಕ್ಷೆ ಇದೆ ಎಂದು ಟ್ವೀಟ್​ ಮಾಡಿದ್ದಾರೆ.

    ಚೀನಾದವರು ತಮ್ಮ ಭೂಮಿಯನ್ನು ಅತಿಕ್ರಮಿಸಿದ್ದಾರೆ ಎಂದು ಲಡಾಖ್​ನ ನಿವಾಸಿಯೊಬ್ಬರು ಹೇಳಿರುವ ವಿಡಿಯೋ ತುಣುಕನ್ನು ಅವರು ತಮ್ಮ ಟ್ವೀಟ್​ಗೆ ಲಗತ್ತಿಸಿದ್ದಾರೆ.

    ಐಎಸ್​ಐ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts