More

    ಪಾವಗಡ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಚ್ಛತೆ ಮರೀಚಿಕೆ

    ಪಾವಗಡ: ಪಟ್ಟಣದ ಹಾಬ್ಬಂಡೆ ಮತ್ತು ಕುರುಬರಹಳ್ಳಿ ಗೇಟ್ ಬಳಿ ಇರುವ ವಸತಿ ನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಸತಿನಿಲಯದಲ್ಲಿನ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ತಾಣಗಳಾಗಿವೆ.

    ತಾಲೂಕಿನಲ್ಲಿ ಇಲ್ಲಿಯವರೆಗೂ ಒಟ್ಟು 19 ಕರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದವರನ್ನು ಪಟ್ಟಣದ ಹಾಬ್ಬಂಡೆ ಬಳಿಯ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಅಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಹೀಗಾಗಿ ಯಾವೊಬ್ಬ ಸಿಬ್ಬಂದಿಯೂ ಕ್ವಾರಂಟೈನ್ ಸೆಂಟರ್‌ಗೆ ಹೋಗಲು ಒಪ್ಪುತ್ತಿಲ್ಲ.

    ಕುರುಬರಹಳ್ಳಿ ಗೇಟ್ ಬಳಿ ಇರುವ ವಸತಿನಿಲಯದಲ್ಲಿ ಇದೇ ಅವ್ಯವಸ್ಥೆ ಕಂಡು ಬಂದಿದ್ದು, ಈ ಕ್ವಾರಂಟೈನ್ ಕೇಂದ್ರವು ನಲಿಗಾನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರಲಿದ್ದು, ಪಾವಗಡ ಪುರಸಭೆಯೇ ಇಲ್ಲಿನ ಸ್ವಚ್ಛತೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳು ಮನವಿ ವಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಾಧಿಕಾರಿ ಒಪ್ಪುತ್ತಿಲ್ಲ. ಹಾಗಾಗಿ ಕ್ವಾರಂಟೈನ್ ಸೆಂಟರ್‌ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುವಂತಾಗಿದೆ.

    ಲಾಕ್‌ಡೌನ್‌ಗೆ ವರ್ತಕರ ಮಿಶ್ರ ಪ್ರತಿಕ್ರಿಯೆ: ಪಾವಗಡ ವರ್ತಕರ ಸಂ ಬೆಳಗ್ಗೆ 7 ರಿಂದ ಮಧ್ಯಾಹ್ನ 2ಗಂಟೆವರೆಗೆ ಅಂಗಡಿ ತೆರೆಯುವುದಾಗಿ ಮಧುಗಿರಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಆದರೆ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾತ್ರಿ ವೇಳೆ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ನಾವು ವ್ಯಾಪಾರ ವಾಡುತ್ತೇವೆ ಎಂದು ಕೆಲ ವ್ಯಾಪಾರಸ್ಥರು ಎಂದಿನಂತೆ ಬೆಳಗ್ಗಿನಿಂದ ರಾತ್ರಿವರೆಗೂ ವ್ಯಾಪಾರ ನಡೆಸುತ್ತಿದ್ದಾರೆ.

    ಕುರುಬರಹಳ್ಳಿ ಗೇಟ್ ವಸತಿ ನಿಲಯ ನಲಿಗಾನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಆದರೂ ಕೆಲ ದಿನಗಳಿಂದ ಪುರಸಭೆಯಿಂದಲೆ ಸ್ವಚ್ಛತೆ ವಾಡಿಸಿದ್ದೇವೆ. ಪಟ್ಟಣದ ಕ್ವಾರಂಟೈನ್ ಕೇಂದ್ರಗಳ ಒಳಗೆ ಹೋಗಲು ಯಾವ ಕಾರ್ಮಿಕರೂ ಒಪ್ಪುತ್ತಿಲ್ಲ, ಕ್ವಾರಂಟೈನ್‌ನಲ್ಲಿರುವವರು ಕಸವನ್ನು ನಮ್ಮ ಸಿಬ್ಬಂದಿಗೆ ನೀಡಿದರೇ ನಾವು ವಿಲೇವಾರಿ ವಾಡುತ್ತೇವೆ.
    ಶಂಷುದ್ದಾಹ ಹಿರಿಯ ಅರೋಗ್ಯ ನಿರೀಕ್ಷಕ, ಪಾವಗಡ ಪುರಸಭೆ

    ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಕ್ವಾರಂಟೈನ್‌ನಲ್ಲಿರುವವರಿಗೆ ಕುಡಿಯುವ ನೀರಿನ ಪೊಟ್ಟಣ, ಬಾಟಲಿ ಹಾಗೂ ಆಹಾರದ ಪೊಟ್ಟಣ ನೀಡುವುದರಿಂದ ಸೇವಿಸಿ ಎಲ್ಲೆಂದರಲ್ಲಿ ಬಿಸಾಕುತ್ತಿದ್ದು, ಸ್ವಚ್ಛತೆ ವಾಡಲು ಸಾಧ್ಯವಾಗುತ್ತಿಲ್ಲ.
    ಟಿ.ಎಸ್.ದಾದಲೂರಿ ನಲಿಗಾನಹಳ್ಳಿ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts