More

    ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ

    ಆಲ್ದೂರು: ಆಲ್ದೂರು ಸಮೀಪದ ಹೆಡದಾಳ್ ಗ್ರಾಮದ ಕಾಫಿ ತೋಟದಲ್ಲಿ ಬುಧವಾರ ಬೆಳಗ್ಗೆ ಕಾಡಾನೆ ದಾಳಿಗೆ ಒರ್ವ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
    ಗಾಳಿಗಂಡಿ ಗ್ರಾಮದ ಯುವತಿ ಮೀನಾ(25) ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಬುಧವಾರ ಬೆಳಗ್ಗೆ 5 ಜನ ಕಾರ್ಮಿಕರು ಹೆಡದಾಳ್ ಗ್ರಾಮದ ಕಾಫಿ ತೋಟಕ್ಕೆ ಔಷಧ ಸಿಂಪಡಿಸುವ ಕೆಲಸಕ್ಕೆ ಹೋಗಿದ್ದಾರೆ. ಬೆಳಗ್ಗೆ 8 ಗಂಟೆ ವೇಳೆಗೆ ಕಾಫಿ ತೋಟದಲ್ಲಿ ತಿಂಡಿ ತಿನ್ನುವ ಸಂಧರ್ಭದಲ್ಲಿ ತೋಟದ ಮಾಲೀಕರು ತೋಟಕ್ಕೆ ಆನೆ ಬಂದಿದೆ. ತಕ್ಷಣ ಎಲ್ಲರೂ ಮನೆಗೆ ವಾಪಾಸ್ಸ್ ಬನ್ನಿ ಎಂದು ಕಾರ್ಮಿಕ ಚಂದ್ರ ಅವರಿಗೆ ಪೋನ್ ಮಾಡಿ ತಕ್ಷಣ ತೋಟಕ್ಕೆ ಬಂದಿದ್ದಾರೆ.
    ಅಷ್ಟರಲ್ಲಾಗಲೇ ಕಾಡಾನೆ ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಚಲ್ಲಾ ಪಿಲ್ಲಿಯಾಗಿ ಓಡಿದ್ದಾರೆ. ಮೀನಾ ಡಕ್‌ಪ್ಯಾಕ್ ಶೂ ಹಾಕಿದ್ದರಿಂದ ಓಡಲು ಸಾಧ್ಯವಾಗದೆ ಆನೆ ದಾಳಿಗೆ ಸಿಲುಕಿದ್ದಾರೆ. ಆನೆ ಮೀನಾ ಅವರನ್ನು ಸೊಂಡಲಿನಿಂದ ಹಿಡಿದು ಕಾಲಿನಿಂದ ತುಳಿದು ಸಾಯಿಸಿದೆ. ತೋಟದ ಮಾಲೀಕ ಮತ್ತೊಬ್ಬ ಕಾರ್ಮಿಕ ಮಹಿಳೆ ಮಂಜುಳಾ ಅವರನ್ನು ಆನೆಗೆ ಸಿಗದಂತೆ ತೋಟದ ಒಳಗೆ ತಳ್ಳಿದ್ದಾರೆ. ಇದರಿಂದ ಮಂಜುಳಾ ಪಾರಾಗಿದ್ದಾರೆ. ಇತರ ಕಾರ್ಮಿಕರಾದ ಚಂದ್ರು, ರಂಜಿತ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
    ಪ್ರತಿಭಟನೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಸ್ಿ ಉಪೇಂದ್ರ ಪ್ರತಾಪ್‌ಸಿಂಗ್, ಎಸಿಎ್ ರಘು, ಮೂಡಿಗೆರೆ ಆರ್‌ಎ್ಒ ಚರಣ್‌ಕುಮಾರ್, ಎಡಿಸಿ ನಾರಾಯಣರೆಡ್ಡಿ ಕನಕರೆಡ್ಡಿ , ತಹಸೀಲ್ದಾರ್ ಸುಮಂತ್, ಆಲ್ದೂರು ಆರ್‌ಎ್ಒ ಹರೀಶ್, ಡಿಎ್ಒ ರಮೇಶ್ ಬಾಬು, ಆಡಿಷನಲ್ ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಸತ್ಯನಾರಾಯಣ್, ಪಿಎಸ್‌ಐಗಳಾದ ರವೀಶ್, ಅಕ್ಷಿತಾ , ಗ್ರಾಮಾಂತರ ಸಿಪಿಐ ಸಚಿನ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts