More

    ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯ

    ಗಂಗಾವತಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿ ಕಾರ್ಮಿಕ ನಿರೀಕ್ಷಕ ಗೋಪಾಲ್ ಧೂಪದ್‌ರಿಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಯಶವಂತಪುರ ಕ್ಷೇತ್ರದ ಪೌರಕಾರ್ಮಿಕರಿಗೆ ‘ಶಾಸಕರ ರಾಜ್ಯೋತ್ಸವ ಪ್ರಶಸ್ತಿ’

    ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿ ಅವೈಜ್ಞಾನಿಕ ತೀರ್ಮಾನಗಳಿಂದ ದೊರೆಯಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. 14 ಲಕ್ಷ ಮಕ್ಕಳ ಶೈಕ್ಷಣಿಕ ಧನ ಸಹಾಯ ಯೋಜನೆ ನೆನೆಗುದಿಗೆ ಬಿದ್ದಿದ್ದು, ಕಾರ್ಮಿಕರಿಗೆ ತೊಂದರೆಯಾಗಿದೆ.

    ಆರೋಗ್ಯ ಇಲಾಖೆಯಿಂದ ತಪಾಸಣೆ ಶಿಬಿರ ಆಯೋಜನೆ, ಕಲ್ಯಾಣ ಮಂಡಳಿಯ ರೂಪಿಸಿರುವ ವೆಬ್‌ಸೈಟ್ ಮೂಲಕವೇ ಗುರುತಿನ ಚೀಟಿ ವಿತರಿಸಬೇಕು. ಮದುವೆ ಸೇರಿ ಇತರೆ ಸಹಾಯಧನ ಯೋಜನೆ 3 ತಿಂಗಳೊಳಗೆ ಮಂಜೂರು ಮಾಡುವುದು, ಕಾರ್ಮಿಕರ ಸಂಘಟನೆಗಳಿಗೆ ಮಂಜೂರಾದ ಲ್ಯಾಪ್‌ಟ್ಯಾಪ್ ವಿತರಣೆಯ ಬಗ್ಗೆ ಮಾಹಿತಿ ನೀಡುವುದು, ಕಾರ್ಮಿಕ ಮಂಡಳಿಯಲ್ಲಿ ಎಐಟಿಯುಸಿಗೆ ಖಾಯಂ ಸದಸ್ಯತ್ವ ನೀಡುವಂತೆ ಒತ್ತಾಯಿಸಿದರು.

    ಜಿಲ್ಲಾಧ್ಯಕ್ಷ ಎ.ಎಲ್.ಹುಲುಗಪ್ಪ, ಪದಾಧಿಕಾರಿಗಳಾದ ಖಾಸೀಂಸಾಬ್, ನಾಗೇಶ ಭೋವಿ, ಬಸವರಾಜನಾಯಕ, ಕಂಠೆಪ್ಪ ಸಿಂಗನಾಳ್, ನೀಲಪ್ಪ ಗುಂಡೂರು, ಶೇಖಮ್ಮ, ಮರಿಯಮ್ಮ, ಕರಿಯಪ್ಪ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts