More

    ನಾಯಕತ್ವ ಹೊಣೆ ಹೊರಲು ರೆಡಿಯಾಗಿರುವ ರಾಹುಲ್​ಗೆ ಮಾದರಿ ನಾಯಕರು ಯಾರು ಗೊತ್ತೆ..?

    ಬೆಂಗಳೂರು: ಕರ್ನಾಟಕದ ಕೆಎಲ್​ ರಾಹುಲ್​ ಮೊದಲ ಬಾರಿಗೆ ಐಪಿಎಲ್​ನಲ್ಲಿ ನಾಯಕತ್ವ ವಹಿಸಿಕೊಳ್ಳಲು ಸಿದ್ಧವಾಗುತ್ತಿದ್ದಾರೆ. ನಾಯಕತ್ವದಲ್ಲಿ ಹೊಸಬರಾದರೂ ದಿಗ್ಗಜರೊಂದಿಗೆ ಡ್ರೆಸ್ಸಿಂಗ್​ ರೂಂ ಹಂಚಿಕೊಂಡಿರುವ ಅನುಭವ ಹೊಂದಿದ್ದಾರೆ. ಜತೆಗೆ ಟೀಮ್​ ಇಂಡಿಯಾ ಮಾಜಿ ನಾಯಕ ಅನಿಲ್​ ಕುಂಬ್ಳೆ ಮಾರ್ಗದರ್ಶನ ತಂಡಕ್ಕಿದೆ. ಸಿಎಸ್​ಕೆ ನಾಯಕ ಎಂಎಸ್​ ಧೋನಿ, ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ, ಮುಂಬೈ ನಾಯಕ ರೋಹಿತ್​ ಶರ್ಮರಂಥ ಆಟಗಾರರ ಜತೆಗೆ ಆಡಿರುವ ರಾಹುಲ್​ಗೆ ನಾಯಕತ್ವ ಹೊಣೆ ನಿಭಾಯಿಸುವುದು ಕಷ್ಟವಲ್ಲ ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಕೊಹ್ಲಿ ಹಾಗೂ ಧೋನಿ ಅವರಿಂದ ನಾಯಕತ್ವ ಗುಣ ಕಲಿತುಕೊಂಡಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ವಿಶ್ವದ ವೇಗದ ಓಟಗಾರ ಉಸೇನ್​ ಬೋಲ್ಟ್‌ಗೆ ಕರೊನಾ ಪಾಸಿಟಿವ್

    ನಾಯಕತ್ವ ಹೊಣೆ ಹೊರಲು ರೆಡಿಯಾಗಿರುವ ರಾಹುಲ್​ಗೆ ಮಾದರಿ ನಾಯಕರು ಯಾರು ಗೊತ್ತೆ..?ಧೋನಿ ಅವರ ಸಮಾಧಾನಚಿತ್ತ, ಆಟಗಾರರನ್ನು ಬೆಂಬಲಿಸುವುದು, ತಂಡ ಮುನ್ನಡೆಸುವ ವಿರಾಟ್​ ಶೈಲಿ, ಆಟಗಾರರು ಉತ್ತಮ ನಿರ್ವಹಣೆ ನೀಡಬೇಕೆಂಬ ಅವರ ಬಯಕೆ ಇಷ್ಟವಾಗುತ್ತದೆ ಜತೆಗೆ ರೋಹಿತ್​ ಶರ್ಮ ಯುವಕರಿಗೆ ನೀಡುವ ಪ್ರೋತ್ಸಾಹದಿಂದ ಉತ್ತೇಜನಗೊಂಡಿದ್ದೇನೆ ಎಂದು ಹೇಳುತ್ತಾರೆ ರಾಹುಲ್​. ರೋಹಿತ್​ ಹಾಗೂ ಧೋನಿಯೇ 7 ಟ್ರೋಫಿ ಹಂಚಿಕೊಂಡಿದ್ದಾರೆ 4 ಬಾರಿ ರೋಹಿತ್​ ನಾಯಕತ್ವದ ಮುಂಬೈ ಇಂಡಿಯನ್ಸ್​, 3 ಬಾರಿ ಸಿಎಸ್​ಕೆ ಈ ಸಾಧನೆ ಮಾಡಿದೆ. ನಾಯಕತ್ವ ಬೆಳವಣಿಗೆಗೆ ಇದೊಂದು ಉತ್ತಮ ವೇದಿಕೆ, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ವಿಶ್ವಾಸವಿದೆ ಎಂದು ಕರ್ನಾಟಕದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಕೆಎಲ್​ ರಾಹುಲ್​ ಹೇಳಿದ್ದಾರೆ.

    ಇದನ್ನೂ ಓದಿ: ಸಚಿನ್​, ಕೊಹ್ಲಿ ಕ್ರಿಕೆಟ್​ ಬ್ಯಾಟ್​ ತಯಾರಕ ಅಶ್ರಾಫ್​ ಚೌಧರಿಗೆ ನಟ ಸೋನು ಸೂದ್​ ನೆರವು..!

    ಯುಎಇ ಕಿಂಗ್ಸ್​ ಇಲೆವೆನ್​ ಪಾಲಿಗೆ ಅದೃಷ್ಠದ ನೆಲದ ಅಂತಾನೇ ಹೇಳಲಾಗುತ್ತಿದೆ. ಇದಕ್ಕೆ ಕಾರಣ 2014ರಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಟೂನಿರ್ ಆರಂಭಿಕ 20 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು. ಈ ವೇಳೆ ಪಂಜಾಬ್​ ತಂಡ ಬಹುತೇಕ ಯಶಸ್ವಿಯೂ ಆಗಿತ್ತು. ಅದೇ ವರ್ಷ ಪಂಜಾಬ್​ ತಂಡ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿತ್ತು. ಆದರೆ, ಫೈನಲ್​ ಪಂದ್ಯದಲ್ಲಿ ಕೆಕೆಆರ್​ ಎದುರು 3 ವಿಕೆಟ್​ ಗಳಿಂದ ಸೋಲನುಭವಿಸಿತ್ತು. ಆ ವರ್ಷ ಪಂಜಾಬ್​ ಪಾಲಿಗೆ ಇದುವರೆಗೂ ಅತ್ಯಂತ ಯಶಸ್ವಿ ವರ್ಷವೂ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts