ಚೂರಿಕಟ್ಟೆಯಲ್ಲಿ ಹಾಶೀಮ್ ಅಂತ್ಯಸಂಸ್ಕಾರ

blank

ತಾಳಗುಪ್ಪ: ಕುವೈತ್​ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಚೂರಿಕಟ್ಟೆಯ ಹಾಶೀಮ್ ಫರೀದ್​ಸಾಬ್ ಅವರ ಮೃತದೇಹ ಭಾನá-ವಾರ ಕುವೈತ್​ನಿಂದ ಸ್ವಗ್ರಾಮಕ್ಕೆ ಮರಳಿದ್ದು ಮುಸ್ಲಿಂ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಎರಡು ವರ್ಷದ ಹಿಂದೆ ಉದ್ಯೋಗ ಅರಸಿ ಕುವೈತ್​ಗೆ ತೆರಳಿದ್ದ ಚೂರಿಕಟ್ಟೆಯ ಗುಜರಿ ವ್ಯಾಪಾರಿ ಫರೀದ್ ಸಾಬ್ ಅವರ ಏಕೈಕ ಪುತ್ರ ಹಾಶೀಮ್ ಕುವೈತ್​ನ ಮಹಬೂಲದ ಆರ್ಡರ್ ಸರ್ವಿಸ್ ಫಾರ್ ಲಾಜಿಸ್ಟಿಕ್ ಕಂಪನಿಯಲ್ಲಿ ಬೈಕ್ ಡ್ರೖೆವರ್ ಆಗಿ ಕೆಲಸ ಮಾಡುತ್ತಿದ್ದನು. 2020ರ ಡಿಸೆಂಬರ್ 25ರಂದು ಆತನ ಮೃತದೇಹ ಸಮುದ್ರತಟದಲ್ಲಿ ಪತ್ತೆಯಾಗಿತ್ತು. ಡಿ.27ರಂದು ಕಂಪನಿ ಅಧಿಕಾರಿಗಳು ಹಾಶೀಮ್ ಸಮುದ್ರದಲ್ಲಿ ಈಜುವಾಗ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಆದರೆ ಕುವೈತ್​ನಲ್ಲಿರುವ ಕುಟುಂಬ ಮಿತ್ರರು ಅವನು ವಾಸ್ತವ್ಯವಿದ್ದ ಕೊಠಡಿಯಲ್ಲಿ ಸಿಕ್ಕ ರಕ್ತಸಿಕ್ತ ಬಟ್ಟೆಗಳನ್ನು ಕಂಡು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಕುಟುಂಬದವರು ವಿವಿಧ ಇಲಾಖೆ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಗೆ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದರು. ಕುವೈತ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮೃತ ದೇಹವನ್ನು ಊರಿಗೆ ಕಳಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೃತಪಟ್ಟ 23 ದಿನಗಳ ನಂತರ ಹಾಶೀಮ್ ಮೃತ ದೇಹ ಗ್ರಾಮಕ್ಕೆ ತಲುಪಿದೆ. ಹೊರನಾಡಿನಲ್ಲಿ ದುಡಿದು ತಂದೆ-ತಾಯಿಗೆ ನೆಮ್ಮದಿ ಬದುಕು ಕಲ್ಪಿಸಬೇಕು. ಮನೆ ಕಟ್ಟಬೇಕು ಎಂದು ಕುವೈತ್​ಗೆ ತೆರಳಿದ್ದ ಹಾಶೀಮ್ ಫೆಬ್ರವರಿಯಲ್ಲಿ ಊರಿಗೆ ಮರಳುವುದಾಗಿ ತಿಳಿಸಿದ್ದನು.

Share This Article

ನಿಮ್ಮ ದೇಹವನ್ನು ಸ್ಲಿಮ್ ಮಾಡುವ 6 ಪ್ರಾಣಿಗಳು: ಪ್ರತಿದಿನ ಈ ರೀತಿ ಮಾಡಿದ್ರೆ ರಿಸಲ್ಟ್​ ಗ್ಯಾರಂಟಿ! Body Slim

Body Slim : ಈಗಿನ ಪೀಳಿಗೆಯ ಮಂದಿ ತಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ.…

ಈ 3 ರಾಶಿಯವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ… ಏಕೆ ಗೊತ್ತಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದಾಗುವ ಉಪಯೋಗವೇನು?: ನಿಮಗಾಗಿ ಹೆಲ್ತಿ ಮಾಹಿತಿ | Health Tips

ಅನೇಕ ಆಹಾರಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದು ಗೊತ್ತೆ ಇದೆ. ಕರಿಬೇವಿನ ಎಲೆಯನ್ನು ಬಳಸುವುದರಿಂದ ಚಟ್ನಿ ಅಥವಾ…