More

    ಕುವೈತ್​ನಲ್ಲಿ ವಲಸಿಗರ ಕಾಯ್ದೆ ಜಾರಿ, ಸ್ವದೇಶಕ್ಕೆ ಮರಳುತ್ತಾರಾ 8 ಲಕ್ಷ ಭಾರತೀಯರು?

    ನವದೆಹಲಿ: ಕವೈತ್​ನ ರಾಷ್ಟ್ರೀಯ ಸಂಸತ್ತು ವಲಸಿಗರ ಕೋಟಾ ಮಸೂದೆಯನ್ನು ಅಂಗೀಕರಿಸಿದೆ. ಇದರಿಂದಾಗಿ ಆ ರಾಷ್ಟ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ 8 ಲಕ್ಷ ಭಾರತೀಯರ ಭವಿಷ್ಯಕ್ಕೆ ಸಂಚಕಾರ ಒದಗಿದೆ.

    ವಲಸಿಗರ ಮಸೂದೆಯ ಪ್ರಕಾರ ಆ ರಾಷ್ಟ್ರದ ಒಟ್ಟು ಜನಸಂಖ್ಯೆಯ ಶೇ.15 ಭಾರತೀಯ ಉದ್ಯೋಗಿಗಳನ್ನು ಹೊಂದಲು ಅವಕಾಶವಿದೆ. ಹಾಗಾಗಿ ಶೇ.15ಕ್ಕಿಂತ ಹೆಚ್ಚಿರುವ ಭಾರತೀಯ ಉದ್ಯೋಗಿಗಳನ್ನು ಸ್ವದೇಶಕ್ಕೆ ರವಾನಿಸುವ ಕಾರ್ಯಸೂಚಿ ಮತ್ತು ಕಾರ್ಯತಂತ್ರವನ್ನು ರೂಪಿಸುವ ಜವಾಬ್ದಾರಿಯನ್ನು ಸಮಿತಿಯೊಂದಕ್ಕೆ ವಹಿಸಲಾಗಿದೆ.

    ದೇಶದಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಪ್ರಮಾಣವನ್ನು ಶೇ.70ರಿಂದ ಶೇ.30ಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ದೇಶದ ಉದ್ಯೋಗ ಕ್ಷೇತ್ರದಲ್ಲಿ ಆಗಿರುವ ಅಸಮತೋಲನವನ್ನು ಭವಿಷ್ಯದಲ್ಲಿ ಸರಿಪಡಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಕುವೈತ್​ ಪ್ರಧಾನಿ ಶೇಖ್​ ಸಬಾ ಅಲ್​ ಖೈದ್​ ಅಲ್​ ಸಬಾ ಹೇಳಿಕೆ ನೀಡಿದ ಬೆನ್ನಲ್ಲೇ ಸಂಸತ್​ನಲ್ಲಿ ಈ ಕಾಯ್ದೆಗೆ ಅನುಮೋದನೆ ದೊರೆತಿದೆ.

    ಇದನ್ನೂ ಓದಿ: ಲಾಕ್​ಡೌನ್​ನಿಂದ ದೆಹಲಿಯಲ್ಲಿ ಸಿಲುಕಿಕೊಂಡ, ಮರಳಿದ ಮೇಲೆ ಗುಪ್ತಾಂಗಗಳಿಗೆ ಸ್ಯಾನಿಟೈಸರ್​ ಹಾಕಿಸಿಕೊಂಡ!

    ಕುವೈತ್​ನ ಒಟ್ಟು ಜನಸಂಖ್ಯೆ 4.8 ದಶಲಕ್ಷವಿದೆ. ಇದರಲ್ಲಿ ವಲಸಿಗರ ಸಂಖ್ಯೆಯೇ 3.4 ದಶಲಕ್ಷವಾಗಿದೆ. ವಲಸಿಗರ ಕಾಯ್ದೆ ಜಾರಿಗೆ ಬಂದ ಬಳಿಕ 1.45 ದಶಲಕ್ಷದಷ್ಟು ಇರುವ ಭಾರತೀಯ ವಲಸಿಗರ ಪೈಕಿ ಒಟ್ಟು 8 ಲಕ್ಷ ಭಾರತೀಯರು ಉದ್ಯೋಗ ನಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಅಂದಾಜಿಸಿದೆ.

    ಯುಎಇಯಲ್ಲೂ ಕಾದಿದೆಯಾ ಶಾಕ್​: ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಭಾರತದಿಂದ ವಲಸೆ ಹೋಗಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಲಸಿಗ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕುರಿತು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಅಲ್ಲಿಯೂ ಕೂಡ ಕುವೈತ್​ಗಿಂತಲೂ ಭಾರಿ ಶಾಕ್​ ಕಾದಿರುವುದಾಗಿ ಹೇಳಲಾಗುತ್ತಿದೆ.

    ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ; ತನಿಖೆ ನಡೆದಷ್ಟೂ ಪೊಲೀಸರೇ ಸಿಕ್ಕಿಬೀಳುತ್ತಿದ್ದಾರೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts