More

    ಕೆಲಸಕ್ಕೆಂದು ಹೋಗಿ ಕುವೈತ್​ನಲ್ಲಿ ಸಿಲುಕಿ ಪರದಾಡುತ್ತಿರುವ ಮಹಿಳೆ: ನೆರವಿಗೆ ಮುಂದಾದ ಕೊಡಗು ಜಿಲ್ಲಾಡಳಿತ

    ಕೊಡಗು: ಕೆಲಸಕ್ಕೆಂದು ಹೋಗಿ ಕುವೈತ್​ನಲ್ಲಿ ಸಿಲುಕಿ ಪರದಾಡುತ್ತಿರುವ ಕೊಡಗು ಮೂಲದ ಮಹಿಳೆಯ ನೆರವಿಗೆ ಕೊಡಗು ಜಿಲ್ಲಾಡಳಿತ ನೆರವಿಗೆ ಬಂದಿದೆ.

    ಕುಶಾಲನಗರ ತಾಲೂಕು ನೆಲ್ಲಿಹುದಿಕೇರಿ ಸಮೀಪದ ಕರಡಿಗೋಡು ನಿವಾಸಿ ಪಾರ್ವತಿ (32) ಬಂಧಿಯಾದ ಮಹಿಳೆ. ಏಜೆಂಟ್ ಮಾಡಿದ ವಂಚನೆಯಿಂದ ಪಾರ್ವತಿ ದೂರದ ಕುವೈತ್​ನಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಕೆಲಸ ಕೊಡಿಸುವುದಾಗಿ ಹೇಳಿ ವಿದೇಶಕ್ಕೆ ಕಳುಹಿಸಿದ ಏಜೆಂಟ್, ಇದೀಗ ಮಹಿಳೆಯನ್ನು ಅಡಕತ್ತರಿಯಲ್ಲಿ ಬಿಟ್ಟು ಮಾಯವಾಗಿದ್ದಾನೆ.

    ಪಾರ್ವತಿ ವಾಟ್ಸ್​ಆ್ಯಪ್​ ಕಾಲ್ ಮೂಲಕ ತನಗಾಗುತ್ತಿರುವ ನೋವನ್ನು ತೋಡಿಕೊಂಡಿದ್ದು, ನನ್ನನ್ನು ಹೇಗಾದರೂ ಭಾರತಕ್ಕೆ ಕರೆಸಿಕೊಳ್ಳಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ. ತಮಿಳುನಾಡು ಏಜೆಂಟ್ ಹನೀಫ್ ಮೂಲಕ ವಿದೇಶದಲ್ಲಿ ಕೆಲಸ ಕೇಳಿದ್ದ ಮಹಿಳೆ, ಸೆ.3 ರಂದು ಕರಡಿಗೋಡಿನಿಂದ ಹೊರಟು ಸೆ.4ಕ್ಕೆ ಕುವೈತ್ ತಲುಪಿದ್ದರು. ಭಾರತೀಯರ ಮನೆಯಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಏಜೆಂಟ್ ಕರೆಸಿಕೊಂಡಿದ್ದ.

    ಭಾರತದ ಏಜೆಂಟ್ ಮೂಲಕ ಕುವೈತ್​​ನ ಶ್ರೀಲಂಕಾದ ಏಜಂಟ್ ಸಮೀರ್ ಎಂಬಾತನನ್ನು ಸಂಪರ್ಕಿಸಿ ಪಾರ್ವತಿ ಕೆಲಸಕ್ಕೆ ಸೇರಿದ್ದರು. ಆದರೆ, ಪಾಸ್​ಪೋರ್ಟ್ ಹಾಗೂ ವಿಸಾ ಕಿತ್ತಿಟ್ಟಿರುವ ಮನೆ ಮಾಲೀಕ, ಏಜೆಂಟ್ ಪಡೆದಿರುವ ಮೂರು ಲಕ್ಷ ನೀಡಿದರೆ ಮಾತ್ರ ದಾಖಲೆ ನೀಡುವುದಾಗಿ ಹೇಳಿದ್ದಾರೆ. ಇದೀಗ ಅಲ್ಲೂ ಇರಲಾಗದೆ ಮತ್ತು ಭಾರತಕ್ಕೂ ಬರಲಾಗದೆ ಮಹಿಳೆ ಕಂಗಲಾಗಿದ್ದಾರೆ.

    ತನಾಗದ ಹಿಂಸೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಪಾರ್ವತಿ, ಸರಿಯಾಗಿ ಊಟ, ತಿಂಡಿ ನೀಡದೆ ಮನೆಯ ಮಾಲೀಕ ಹಿಂಸೆ ನೀಡುತ್ತಿದ್ದಾರೆ ಎಂದಿದ್ದಾರೆ. ಇದೀಗ ಪಾರ್ವತಿಯ ಸಹಾಯಕ್ಕೆ ಕೊಡಗು ಜಿಲ್ಲಾಡಳಿತ ಮುಂದಾಗಿದ್ದು, ಭಾರತೀಯ ರಾಯಭಾರಿ ಕಚೇರಿಗೂ ಸಂಪರ್ಕಿಸಿ, ಪಾರ್ವತಿಯ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳು ವಿಚಾರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ವಿದ್ಯಾರ್ಥಿಯ ಅಸಭ್ಯ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ ಅಪರ್ಣಾ ಬಾಲಮುರಳಿ

    ಮಂಗಳೂರಲ್ಲಿ ಗಾಂಜಾ ಪ್ರಕರಣ: ಇಬ್ಬರು ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು

    ಸುಕೇಶ್ ನನ್ನ ಬದುಕು ನರಕ ಮಾಡಿದ: ದೂರು ದಾಖಲಿಸಿದ ನಟಿ ಜಾಕ್​ಲೀನ್ ಫರ್ನಾಂಡಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts