More

    ಸ್ವದೇಶಕ್ಕೆ ಮರಳಲು ಕುವೈತ್ ಕನ್ನಡಿಗರಿಗೆ ವಿಮಾನವಿಲ್ಲ

    ಮಂಗಳೂರು: ಕುವೈತ್‌ನಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ಸುಮಾರು ಆರು ಸಾವಿರ ಭಾರತೀಯರು ತಾಯ್ನಡಿಗೆ ಮರಳಲು ಕುವೈತ್ ಸರ್ಕಾರ ವಿಮಾನಯಾನದ ಉಚಿತ ಟಿಕೆಟ್, ಲಾಕ್‌ಡೌನ್ ಸಂದರ್ಭ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ, ಉಚಿತ ಆಹಾರ ವ್ಯವಸ್ಥೆ ಮಾಡಿದ್ದರೂ, ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ತನ್ನ ರಾಜ್ಯದ ನಿವಾಸಿಗಳು ಊರಿಗೆ ಮರಳಲು ಅನುಮತಿ ನೀಡಿಲ್ಲ.

    ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕುವೈತ್‌ನಲ್ಲಿ ಅನಧಿಕೃತ ವಾಸಿಗಳೆಂದು ಗುರುತಿಸಲ್ಪಟ್ಟಿರುವ ತನ್ನ ರಾಜ್ಯದ ನಿವಾಸಿಗಳು ಊರಿಗೆ ಮರಳಲು ಈಗಾಗಲೇ ಅನುಮತಿ ನೀಡಿದೆ.
    ವಂದೇ ಭಾರತ್ ಮಿಷನ್ ಯೋಜನೆಯಡಿ ಕೂಡ ಕುವೈತ್‌ನಲ್ಲಿರುವ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯವಾಗಿದೆ. ಈ ಯೋಜನೆಯಡಿ ಪ್ರಥಮ ಹಾಗೂ ದ್ವಿತೀಯ ಎರಡು ಪಟ್ಟಿಗಳಲ್ಲಿ ಕೂಡ ಕುವೈತ್ ಕರ್ನಾಟಕಕ್ಕೆ ಒಂದು ವಿಮಾನವೂ ಇಲ್ಲ. ಕುವೈತ್‌ನ ನಿರಾಶ್ರಿತರ ಶಿಬಿರಗಳಲ್ಲಿ ಉಚಿತ ಆಹಾರ, ವಾಸ್ತವ್ಯ ವ್ಯವಸ್ಥೆ ಇದೆಯಾದರೂ, ಅಲ್ಲಿರುವ ವೃದ್ಧರು, ಕಾಯಿಲೆ ಪೀಡಿತರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ರಂಜಾನ್ ಉಪವಾಸದ ಸಂದರ್ಭ ಶಿಬಿರಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಮಾತ್ರ ಉಪಹಾರದ ವ್ಯವಸ್ಥೆ ಇದೆ. ಕುವೈತ್‌ನಿಂದ ಭಾರತಕ್ಕೆ ಮರಳಲು ಸುಮಾರು 45 ಸಾವಿರ ಜನರು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಪ್ರಸ್ತುತ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

    ವೀಸಾ ಅವಧಿ ವಿಸ್ತರಣೆ
    ಕುವೈತ್ ಮಿನಿಸ್ಟ್ರಿ ಆಫ್ ಇಂಟೀರಿಯರ್ ಲಾಕ್‌ಡೌನ್ ಸಂದರ್ಭ ಅವಧಿ ಮುಕ್ತಾಯಗೊಳ್ಳುತ್ತಿರುವ ವೀಸಾ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲು ಅವಕಾಶ ಒದಗಿಸಿದೆ. ಇದರಿಂದ ಲಾಕ್‌ಡೌನ್‌ನಿಂದ ಜಗತ್ತಿನ ವಿವಿಧೆಡೆ ಬಾಕಿಯಾಗಿ ಕುವೈತ್ ವೀಸಾ ಅವಧಿ ಮುಗಿಯುವ ಆತಂಕ ಎದುರಿಸುತ್ತಿರುವ ಜನರು ನಿರಾಳರಾಗಿದ್ದಾರೆ.

    ಕುವೈತ್‌ನಿಂದ ಕರ್ನಾಟಕಕ್ಕೆ ವಿಮಾನ ಒದಗಿಸಲು ಇಲ್ಲಿರುವ ಭಾರತೀಯರ ವಿವಿಧ ಸಂಘಟನೆಗಳಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ಪರವಾಗಿ ಸಚಿವ ಡಿ.ವಿ.ಸದಾನಂದ ಗೌಡ ಸಹಿತ ಎಲ್ಲರಿಂದ ಭರವಸೆಗಳು ಮಾತ್ರ ಸಿಗುತ್ತಿವೆ. ದಿನಾಂಕ ದೊರೆಯುತ್ತಿಲ್ಲ. ಸುಷ್ಮಾ ಸ್ವರಾಜ್ ಅವರ ಕೊರತೆ ಕಾಡುತ್ತಿದೆ.
    ಮಂಜೇಶ್ವರ ಮೋಹನದಾಸ್ ಕಾಮತ್, ಅನಿವಾಸಿ ಭಾರತೀಯ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts