More

    ಕುವೆಂಪು ವಿವಿ ಆಡಳಿತ ವ್ಯವಸ್ಥೆ ಪೂಣ ಕುಸಿತ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಭಾರಿಗಳ ನಡುವೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಅಲ್ಲಿನ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದು ವಿವಿಯ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಮಧ್ಯಪ್ರವೇಶಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದರು.

    ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳು ಕೂಡ ಆತಂಕದಲ್ಲಿದ್ದಾರೆ. ಒಂದೆಡೆ ಪಾಠಗಳು ನಡೆಯುತ್ತಿಲ್ಲ. ಸಮರ್ಥ ಅಧ್ಯಾಪಕರಿಲ್ಲ. ಪರೀಕ್ಷೆಗಳು ಸಕಾಲಕ್ಕೆ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗುತ್ತಿದ್ದು ಮುಖ್ಯವಾಗಿ ವಿವಿಗೆ ಕಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ)ನೇಮಕ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಜ.24ಕ್ಕೆ ಎಲ್ಲ ಸೆಮಿಸ್ಟರ್‌ಗಳು ಮುಕ್ತಾಯವಾಗಬೇಕಿತ್ತು. 25ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ, ತಮ್ಮ ವೈಲ್ಯ ಮುಚ್ಚಿಕೊಳ್ಳಲು ಪರೀಕ್ಷಾ ದಿನಗಳನ್ನೇ ಮುಂದೂಡಲಾಗಿದೆ. ವೇಳಾಪಟ್ಟಿಯನ್ನು ಮುಂದೂಡುತ್ತ ಹೋದರೆ ಮೌಲ್ಯಮಾಪನ ತರಗತಿಗಳ ಆರಂಭ, ಪ್ರವೇಶ ಪ್ರಕ್ರಿಯೆ ಇವೆಲ್ಲವೂ ಗೊಂದಲದ ಗೂಡಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.
    ಎನ್‌ಇಪಿ ಅಂಕಪಟ್ಟಿ ಕೊಟ್ಟಿಲ್ಲ, ಆನ್‌ಲೈನ್ ಅಂಕಪಟ್ಟಿಗಳು ದೋಷಪೂರಿತವಾಗಿವೆ. ಅಂಕಪಟ್ಟಿಯಲ್ಲಿ ಎನ್‌ಎಸ್‌ಎಸ್, ಕ್ರೀಡೆ ಮತ್ತು ಇತರ ವಿಷಯಗಳನ್ನು ನಮೂದಿಸಿಲ್ಲ. ಇದರಿಂದ ಎಸ್‌ಎಸ್‌ಪಿ(ಸ್ಟೇಟ್ ಸ್ಟುಡೆಂಟ್ಸ್ ಪೋರ್ಟಲ್) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಕಷ್ಟವಾಗಬಹುದು. ಪ್ರಾಚಾರ್ಯರು ಅಸಹಾಯಕರಾಗಿದ್ದಾರೆ. ಪಠ್ಯ ಚಟುವಟಿಕೆಗಳೇ ಕುಂಠಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ವಿವಿಯಿಂದ ಯಾವುದೇ ಕಾಲೇಜಿನ ಜತೆಯ ಸಂವಹನವೇ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಒಂದೆರಡು ದಿನಗಳಲ್ಲಿ 16-17 ಕಾಲೇಜುಗಳ ಪ್ರಾಚಾರ್ಯರ ಜತೆಗೂಡಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಎಂದರು.
    ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಐಡಿಯಲ್ ಗೋಪಿ, ಮುಕ್ತಿಯಾರ್‌ಅಹಮದ್, ಸೈಯ್ಯದ್ ವಾಹಿದ್ ಅಡ್ಡು , ಸಂತೋಷ್ ಆಯನೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts