More

    ಕುಸ್ತಿ ಪಂದ್ಯದಲ್ಲಿ ಪೈಲ್ವಾನ್‌ರ ಸೆಣಸಾಣ, ಹರಪನಹಳ್ಳಿಯ ಕಿರಣ್, ಶಮ್ಮುಗೆ ನಗದು, ಗದೆ

    ಹೂವಿನಹಡಗಲಿ: ಪಟ್ಟಣದ ತೇರು ಹನುಮಪ್ಪ ಸ್ವಾಮಿ ಜಾತ್ರೆ ಪ್ರಯುಕ್ತ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಅಖಾಡ ಪೂಜೆಯೊಂದಿಗೆ ಬಹಿರಂಗ ಜಂಗೀ ಕುಸ್ತಿ ಪಂದ್ಯಾವಳಿಗೆ ಡಿವೈಎಸ್ಪಿ ಮಲ್ಲನಗೌಡ ಹೊಸಮನಿ ಚಾಲನೆ ನೀಡಿದರು.

    ಮೊದಲ ದಿನದ ಪಂದ್ಯಾವಳಿಯಲ್ಲಿ ಬೆಳಗಾವಿ, ಕಲಬುರಗಿ, ಹೊಸಪೇಟೆ, ದಾವಣಗೆರೆ, ಶಿವಮೊಗ್ಗ, ಹರಪನಹಳ್ಳಿ, ಮಾಸೂರು, ಸೊಲ್ಲಾಪುರದ ಪೈಲ್ವಾನರು ಭಾಗವಹಿಸಿದ್ದರು. ಮೊದಲ ಪಂದ್ಯದಲ್ಲಿ ಕಡಕೋಳ ಮಹೇಶರನ್ನು ಹರಪನಹಳ್ಳಿಯ ಕಿರಣ್ ಮಣಿಸಿ 5000 ನಗದು ಮತ್ತು ಗದೆ ಗೆದ್ದುಕೊಂಡರು. 2ನೇ ಪಂದ್ಯದಲ್ಲಿ ಹರಪನಹಳ್ಳಿಯ ಶಮ್ಮು, ಹಾನಗಲ್ ತಾಲೂಕು ಬೊಮ್ಮನಹಳ್ಳಿಯ ನಿಂಗರಾಜರನ್ನು ಸೋಲಿಸಿ 3000 ನಗದು ಮತ್ತು ಗದೆ ಗೆದ್ದರು. ನಂತರ ನಡೆದ ಪಂದ್ಯದಲ್ಲಿ ಜಮಖಂಡಿಯ ಮಹೇಶ ವಿರುದ್ದ ಸೊಲ್ಲಾಪುರದ ಸಚಿನ್, ಶಿವಮೊಗ್ಗದ ಅರುಣ ವಿರುದ್ಧ ಕಲಬುರಗಿಯ ಅಂಬರೀಷ, ಬೆಳಗಾವಿಯ ಶ್ರೀಕಾಂತ ವಿರುದ್ಧ ಮಹೇಶ ಕಡಕೋಳ, ಹರಪನಹಳ್ಳಿ ಕೃಷ್ಣ ವಿರುದ್ಧ ಬೆಳಗಾವಿಯ ನಿರಂಜನ್ ಗೆಲುವು ಸಾಧಿಸಿ ನಗದು ಬಹುಮಾನ ಪಡೆದರು. ಪ್ರೇಕ್ಷಕರು ಕೇಕೆ, ಶಿಳ್ಳೆ, ಚಪ್ಪಾಳೆ ಮೂಲಕ ಕುಸ್ತಿ ಪಟುಗಳನ್ನು ಹುರಿದುಂಬಿಸಿದರು.

    ಎಂ.ರೆಹಮಾನ್, ಎಚ್.ಲೋಲಪ್ಪ, ಟಿ.ಮಹಾಂತೇಶಮ ದೊಡ್ಡಮನಿ ನನ್ನೆಸಾಬ್, ಸುಭಾನ್ ಸಾಬ್, ಗಡಿಗಿ ಬುಳ್ಳಪ್ಪ ನಿರ್ಣಾಯಕರಾಗಿದ್ದರು. ತೇರು ಹನುಮಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಉಪಾಧ್ಯಕ್ಷ ಟಿ.ಮಹಾಂತೇಶ, ಊಳಿಗದ ಹನುಮಂತಪ್ಪ, ಸೊಪ್ಪಿನ ಮಂಜುನಾಥ, ಎಸ್.ತಿಮ್ಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts