More

    ಹಾಲು ಮಹಾ ಮಂಡಳಿಯಿಂದ ಮೆಕ್ಕೆಜೋಳ ಖರೀದಿ

    ಕುಷ್ಟಗಿ: ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಿರುವ ಕರ್ನಾಟಕ ಹಾಲು ಮಹಾ ಮಂಡಳಿಯು ಬೆಂಬಲ ಬೆಲೆಯಲ್ಲಿ ರೈತರ ಮೆಕ್ಕೆಜೋಳ ಉತ್ಪನ್ನ ಖರೀದಿಸಲು ಮುಂದಾಗಿದೆ.

    ರೈತರಿಂದ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಮುಂದಾಗಿರುವ ಕರ್ನಾಟಕ ಹಾಲು ಮಹಾ ಮಂಡಳಿ, 2 ಗೋಣಿ ಚೀಲದ ಮೊತ್ತ 20ರೂ. ಸೇರಿ ಪ್ರತಿ ಕ್ವಿಂಟಾಲ್‌ಗೆ 1,520 ರೂ.ಗೆ ಖರೀದಿಸುತ್ತಿದೆ. ಶನಿವಾರದಿಂದಲೇ ರೈತರ ನೋಂದಣಿ ಆರಂಭಿಸಲಾಗಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿನ ರೈತರ ಮಾಹಿತಿ ಆಧರಿಸಿ ನೋಂದಣಿ ಮಾಡಲಾಗುತ್ತಿದೆ. ತಂತ್ರಾಂಶದಲ್ಲಿ ಮಾಹಿತಿ ಇರದ ರೈತರ ತಾತ್ಕಾಲಿಕ ನೋಂದಣಿ ಮಾಡಿಕೊಂಡು ತಂತ್ರಾಂಶದಲ್ಲಿ ಮಾಹಿತಿ ಅಳವಡಿಸಿದ ನಂತರ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ಖರೀದಿಸಲಾಗುತ್ತಿದೆ ಎಂದು ರಾಬಕೊ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಆಹಾರ ಘಟಕಗಳಿಗೆ ಪೂರೈಕೆ: ಖರೀದಿಸಿದ ಮೆಕ್ಕೆಜೋಳವನ್ನು ಕರ್ನಾಟಕ ಹಾಲು ಮಹಾ ಮಂಡಳಿ ವ್ಯಾಪ್ತಿಯ ರಾಜನಕುಂಟಿ, ಗುಬ್ಬಿ, ಧಾರವಾಡ, ಹಾಸನ ಹಾಗೂ ಶಿಕಾರಿಪುರದ ಪಶು ಆಹಾರ ಘಟಕಗಳಿಗೆ ಪೂರೈಸಲಾಗುತ್ತಿದೆ. 5 ಎಕರೆಗಿಂತ ಕಡಿಮೆ ಹಿಡುವಳಿದಾರರು ಗರಿಷ್ಠ 50 ಕ್ವಿಂಟಾಲ್ ವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

    ನೋಂದಾಯಿತ ರೈತರು ಮೆಕ್ಕೆಜೋಳದ ಮಾದರಿ ಹಾಗೂ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕದ ದಾಖಲೆಯೊಂದಿಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.8105449765, 8726973702 ಕರೆ ಮಾಡಬಹುದಾಗಿದೆ.
    | ಬಸವರಾಜ ಯರದೊಡ್ಡಿ ಖರೀದಿ ಕೇಂದ್ರ ಉಸ್ತುವಾರಿ ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts