More

    ಶಿವಯೋಗ ಸಾಧನೆಯಿಂದ ಚೈತನ್ಯ ಶಕ್ತಿ ವೃದ್ಧಿ

    ಮಳಖೇಡ: ವೀರಶೈವ ಪರಂಪರೆಯಲ್ಲಿ ಶ್ರೇಷ್ಠವಾಗಿರುವ ಶಿವಯೋಗ ಸಾಧನೆಯಿಂದ ಚೈತನ್ಯ ಶಕ್ತಿ ವೃದ್ಧಿಸುತ್ತದೆ ಎಂದು ಸೇಡಂನ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ನುಡಿದರು.

    ಗ್ರಾಮದಲ್ಲಿ ಶ್ರೀ ಚನ್ನವೀರೇಶ್ವರ ಜಾತ್ರೋತ್ಸವ ನಿಮಿತ್ತ ಶನಿವಾರ ರಾತ್ರಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮಾನವರಾಗಿ ಜನಿಸಿದ ಬಳಿಕ ಸತ್ಕಾರ್ಯ ಮಾಡಿ ಸತ್ಕೀರ್ತಿ ಪಡೆಯಬೇಕು. ದಾನ-ಧರ್ಮ ಮಾಡುವುದರಿಂದ ಮಾನವ ಜನ್ಮಕ್ಕೆ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ. ನಿರ್ಮಲ ಭಕ್ತಿಯಿಂದ ಮನುಷ್ಯನ ಮನಸ್ಸು ಪ್ರಫುಲ್ಲ ಮತ್ತು ಶಾಂತವಾಗಿರುತ್ತದೆ. ನಿರ್ಮಲ ಭಕ್ತಿಯಿಂದಲೇ ಭಗವಂತನ ಕರುಣೆ ಸಿಗಲು ಸಾಧ್ಯ ಎಂದರು.

    ಭAಗಿಮಠದ ಪೀಠಾಧಿಪತಿ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯ, ಶ್ರೀ ಶಿವಯೋಗಿ ಶಿವಾಚಾರ್ಯ, ಪ್ರಮುಖರಾದ ಶ್ರೀನಿವಾಸ ಎಕ್ಮಾಯಿ, ಡಾ.ಜಗನ್ನಾಥ ಗಡ್ಡದ, ಮಲ್ಲಿಕಾರ್ಜುನ ಮಾಸ್ಟರ್, ಸಿದ್ಧಲಿಂಗಯ್ಯ ಕೋಡಗಿಮಠ, ರಾಜಶೇಖರ ಕೊಂಕನಳ್ಳಿ, ನಾಗರಾಜ ಬಾಳಿ, ರಾಜಶೇಖರ ಪುರಾಣಿಕ, ಗುರಣ್ಣಪ್ಪ ತಳಕಿನ್, ಚನ್ನಯ್ಯ ಪುರಾಣಿಕ, ಶರಣು ಅವಂಟಿ, ಶಿವಪ್ಪ ತಳಕಿನ್, ಶರಣಯ್ಯ ಸ್ಥಾವರ, ಭೀಮರಾವ ಮಾಲಿಪಾಟೀಲ್, ಕಲ್ಯಾಣಯ್ಯ ಪುರಾಣಿಕ, ಗಣಪತಿ ತಳಕಿನ್, ಸೋಮಶೇಖರ ಪಾಟೀಲ್, ಉದಯಕುಮಾರ ತಳಕಿನ್, ಮಲಕಣ್ಣ ದಂಡೋತಿ, ರಾಜಶೇಖರಯ್ಯ ಮಠಪತಿ ಇತರರಿದ್ದರು. ನಾಗರಾಜ ಮಠಪತಿ ಸ್ವಾಗತಿಸಿ ನಿರೂಪಣೆ ಮಾಡಿದರು. ಲಿಂಗರಾಜ ತಳಕಿನ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts