More

    ಸದಭಿರುಚಿಯ ಚಿತ್ರಗಳು ನಿರ್ಮಾಣವಾಗಲಿ: ಶಾಸಕ ಅಮರೇಗೌಡ ಬಯ್ಯಪುರ ಆಶಯ; ಫಿನಿಕ್ಸ್ ಸಿನಿಮಾದ ಪೋಸ್ಟರ್ ಬಿಡುಗಡೆ

    ಕುಷ್ಟಗಿ: ಪ್ರಸ್ತುತ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸದಭಿರುಚಿಯ ಚಿತ್ರಗಳ ನಿರ್ಮಾಣವಾಗಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಭಿಪ್ರಾಯಪಟ್ಟರು.
    ಪಟ್ಟಣದ ಬಸವ ಭವನದಲ್ಲಿ ಭಾನುವಾರ ‘ಫಿನಿಕ್ಸ್’ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಬಹುತೇಕ ಧಾರಾವಾಹಿಗಳನ್ನು ಕೌಟುಂಬಿಕ ವಿಘಟನೆಗೆ ಪ್ರೇರಣೆ ನೀಡುವಂತೆ ನಿರ್ದೇಶಿಸಲಾಗುತ್ತಿದೆ. ಸಿನಿಮಾಗಳಲ್ಲಿಯೂ ಕ್ರೌರ್ಯ, ಭೂಗತ ಲೋಕದ ಅನಾವರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಗ್ರಾಮೀಣ ಸೊಗಡು ಪರಿಚಯಿಸುವ ಕಾರ್ಯ ಸಿನಿಮಾಗಳಿಂದಾಗಬೇಕಿದೆ. ತಾಲೂಕಿನ ಯುವಕನೊಬ್ಬ ಚಿತ್ರದ ನಾಯಕನಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದರು.

    ಮದ್ದಾನೇಶ್ವರ ಮಠದ ಕರಿಬಸವ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಲವು ಪ್ರತಿಭೆಗಳಿದ್ದು, ಅನಾವರಣಕ್ಕೆ ಅವಕಾಶ ಇಲ್ಲದಂತಾಗಿದೆ. ಬಳೂಟಗಿ ಗ್ರಾಮದ ರಶೀದ್ ಅಲಿಯಾಸ್ ರಕ್ಷಿತ್, ಫಿನಿಕ್ಸ್ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ದೊರೆತ ಅವಕಾಶ ಬಳಸಿಕೊಂಡಿದ್ದಾರೆ. ಗ್ರಾಮೀಣ ಕಲಾವಿದರ ಪ್ರಯತ್ನಕ್ಕೆ ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದರು.

    ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಯುವ ಕಾಂಗ್ರೆಸ್ ರಾಜ್ಯ ಮಾಧ್ಯಮ ವಕ್ತಾರ ಲಾಡ್ಲೆ ಮಷಾಕ್ ದೋಟಿಹಾಳ, ಬಳೂಟಗಿ ಗ್ರಾಮದ ಪ್ರಗತಿಪರ ರೈತ ಜಯತೀರ್ಥ ದೇಸಾಯಿ ಮಾತನಾಡಿದರು. ಚಿತ್ರದ ಇನ್ನೊಬ್ಬ ನಾಯಕ ನಟ ಪ್ರತಾಪ್ ರಡ್ಡಿ, ನಿರ್ದೇಶಕರಾದ ಹೊಸೂರು ವೆಂಕಟೇಶ, ಎಲ್ಲು ಪುಣ್ಯಕೋಟಿ, ನಿರ್ಮಾಪಕ ವಿ.ಸುಭಾಷ್, ನಟಿ ವಿದ್ಯಾ, ಗೀತಾ ಚಿನ್ನಿ, ಬಳೂಟಗಿ ಗ್ರಾಪಂ ಸದಸ್ಯ ಗುದ್ನೆಪ್ಪ ಮೇಟಿ, ಪ್ರಮುಖರಾದ ಉಮೇಶ ಮಂಗಳೂರು, ರಮೇಶ ಮದ್ನಾಳ, ಶ್ರೀಶೈಲಪ್ಪ ಮೇಟಿ, ರಮೇಶ ಎಲಿಗಾರ, ಹನುಮಂತ ಹುಡೇದ್, ಅಮರೇಶ ಪೊಲೀಸ್ ಪಾಟೀಲ್, ಮಲ್ಲೇಶಪ್ಪ ಕನಕಗಿರಿ, ಹುಸೇನ್ ರಗಟಿ, ಮಹೇಶ ಹಡಪದ್, ತಾಜುದ್ದೀನ್ ಮದ್ನಾಳ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts