More

    ಕುಷ್ಟಗಿಯ ಉದ್ಯಾನವನ ಅಭಿವೃದ್ಧಿಪಡಿಸಿ

    ಕುಷ್ಟಗಿ: ಪಟ್ಟಣದ 3ನೇ ವಾರ್ಡ್‌ನ ಗೌರಿ ನಗರದ ಉದ್ಯಾನವನ ಅಭಿವೃದ್ಧಿಪಡಿಸಲು ಒತ್ತಾಯಿಸಿ ವಾರ್ಡ್‌ನ ರಹವಾಸಿಗಳ ನಿವಾಸಿಗಳ ಸಂಘದ ಪದಾಧಿಕಾರಿಗಳು ಪಟ್ಟಣದ ಪುರಸಭೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಸವರಾಜ ಕಮ್ಮಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದವನ ಬಂಧನ

    ಉದ್ಯಾನವನದ ಖಾಲಿ ಜಾಗದಲ್ಲಿ ಸುತ್ತಲಿನ ನಿವಾಸಿಗಳು ಮನೆ ನಿರ್ಮಾಣದ ಕಲ್ಲು ಮಣ್ಣು ಹಾಗೂ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸುವ ಸಾಧ್ಯತೆಗಳಿವೆ. ಉದ್ಯಾನ ಅಭಿವೃದ್ಧಿಪಡಿಸಿದರೆ ಮಕ್ಕಳ ಆಟಕ್ಕೆ ಹಾಗೂ ವಯೋವೃದ್ಧರಿಗೆ ವಿಶ್ರಾಂತಿಗೆ ಅನುಕೂಲವಾಗುತ್ತದೆ. ಕೂಡಲೇ ಸ್ಥಳ ಪರಿಶೀಲನೆ ಉದ್ಯಾನವನದ ಸುತ್ತಲೂ ತಂತಿಬೇಲಿ ಅಳವಡಿಸಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಡಿ.ಬಿ.ಗಡೇದ್, ಉಪಾಧ್ಯಕ್ಷ ಅಭಿನಂದನ್ ಗೋಗಿ, ಕಾರ್ಯದರ್ಶಿ ಬಸವರಾಜ ಗಾಣಗೇರ, ಪ್ರಮುಖರಾದ ಎಸ್.ಎನ್.ಘೋರ್ಪಡೆ, ಅನಿಲಕುಮಾರ ಆಲಮೇಲ, ಮಹಾಂತೇಶ ಮಂಗಳೂರು, ಬಸವರಾಜ ಕೋಳೂರು, ಶಶಿಧರ ಶೆಟ್ಟರ್, ಮಹಾಲಿಂಗಪ್ಪ ದೋಟಿಹಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts