More

    27.37ಲಕ್ಷ ರೂ. ಉಳಿತಾಯ ಬಜೆಟ್

    ಕುಷ್ಟಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಪುರಸಭೆಯ 2023-24ನೇ ಸಾಲಿನ ಆಯವ್ಯಯ ಮಂಡನೆ ಸಭೆ ಶುಕ್ರವಾರ ಏರ್ಪಡಿಸಲಾಗಿತ್ತು. ಅಧ್ಯಕ್ಷ ಜಿ.ಕೆ.ಹಿರೇಮಠ, 27.37ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

    ಎಸ್‌ಎಫ್‌ಸಿ ವೇತನ ಅನುದಾನ, ಎಸ್‌ಎಫ್‌ಸಿ ಆಸ್ತಿ ಸೃಜನ ಅನುದಾನ, ಎಸ್‌ಎಫ್‌ಸಿ ವಿಶೇಷ ಅನುದಾನ, ಬೀದಿ ದೀಪ ಹಾಗೂ ಕುಡಿವ ನೀರಿನ ಸ್ಥಾವರಗಳ ವಿದ್ಯುತ್ ಬಿಲ್ ಅನುದಾನ, 15ನೇ ಹಣಕಾಸು ಸೇರಿ ವಿವಿಧ ಅನುದಾನ ಹಾಗೂ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ ಶುಲ್ಕ, ಅಭಿವೃದ್ಧಿ ಶುಲ್ಕ ಇತರ ಆದಾಯ ಮೂಲಗಳನ್ನೊಳಗೊಂಡ 20.96 ಕೋಟಿ ರೂ. ಮೊತ್ತದಲ್ಲಿ ಕಾಯಂ ನೌಕರರ ವೇತನಕ್ಕೆ 2.18 ಕೋಟಿ ರೂ., ಬೀದಿ ದೀಪ ಹಾಗೂ ಕುಡಿವ ನೀರಿನ ಸ್ಥಾವರಗಳ ವಿದ್ಯತ್ ಬಿಲ್‌ಗೆ 8.85 ಕೋಟಿ, ಮುಖ್ಯ ರಸ್ತೆಗಳ ನಿರ್ಮಾಣಕ್ಕೆ 4.05 ಕೋಟಿ ರೂ., ಚರಂಡಿ ನಿರ್ಮಾಣಕ್ಕೆ 18ಲಕ್ಷ ರೂ. ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮೀಸಲಿಡುವ ಮೂಲಕ 27.37ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು. ಉಪಾಧ್ಯಕ್ಷೆ ಹನುಮವ್ವ ಕೋರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ್, ಮುಖ್ಯಾಧಿಕಾರಿ ಧರಣೇಂದ್ರಕುಮಾರ ಇದ್ದರು.

    ಸದಸ್ಯರ ಉದಾಸೀನ: ಸಭೆ ಆರಂಭಗೊಂಡ 20 ನಿಮಿಷದಲ್ಲಿ ಮುಕ್ತಾಯಗೊಂಡಿತು. 23 ಸದಸ್ಯರ ಪೈಕಿ ಅಧ್ಯಕ್ಷ, ಉಪಾಧ್ಯಕ್ಷ, ನಾಮ ನಿರ್ದೇಶಿತ ಸದಸ್ಯರನ್ನೊಳಗೊಂಡಂತೆ 16 ಮಂದಿ ಹಾಜರಿದ್ದರು. ಅಧ್ಯಕ್ಷ ಜಿ.ಕೆ.ಹಿರೇಮಠ ಬಜೆಟ್‌ನ ಪ್ರಮುಖಾಂಶಗಳನ್ನು ಓದಿ ಹೇಳುತ್ತಿರುವಾಗಲೇ ಕೆಲ ಸದಸ್ಯರು ಹೊರನಡೆದರು. ಬಜೆಟ್ ಕುರಿತ ಪರ ವಿರೋಧ ಚರ್ಚೆ ನಡೆಯದೆ ನೀರಸವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts