More

    ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹವಿರಲಿ; ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ರಾಮಚಂದ್ರರಾವ್ ಹೇಳಿಕೆ

    ಕುಷ್ಟಗಿ: ಸಮಾಜಮುಖಿ ಕಾರ್ಯ ಮಾಡುವವರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ರಾಮಚಂದ್ರರಾವ್ ಹೇಳಿದರು. ಪಟ್ಟಣದ ಬನ್ನಿ ಮಹಾಂಕಾಳಿ ದೇವಸ್ಥಾನದ ಮಹಾಭಿಷೇಕ ನಿಮಿತ್ತ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಮಾಜದ ದುರ್ಬಲರಿಗೆ ನೆರವು ನೀಡುವ ಶಕ್ತಿ ಇದ್ದರೂ ಕೆಲವರಿಗೆ ಇಚ್ಛಾಶಕ್ತಿ ಇರುವುದಿಲ್ಲ. ಇಚ್ಛಾಶಕ್ತಿ ಇರುವವರಿಗೆ ಶಕ್ತಿ ಇರುವುದಿಲ್ಲ. ಪಟ್ಟಣದ ಭಗತ್ ಸಿಂಗ್ ಸಂಸ್ಥೆಯ ಅಧ್ಯಕ್ಷ ವಜೀರ್ ಅಲಿ ಗೋನಾಳರಿಗೆ ಎರಡೂ ಶಕ್ತಿ ಇರುವುದರಿಂದಲೇ ಪ್ರತಿ ವರ್ಷ ಸರ್ವ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುತ್ತ ಬಂದಿದ್ದಾರೆ. ಅವರ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರ ಹೊರೆ ಕಡಿಮೆ ಮಾಡಬೇಕಿದೆ ಎಂದರು.

    ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ವಜೀರ್ ಅಲಿ ಗೋನಾಳ ಬನ್ನಿ ಮಹಾಂಕಾಳಿಯ ಭಕ್ತರಾಗಿದ್ದಾರೆ. ದೇವಿಯ ಮಹಾಭಿಷೇಕ ಹಿನ್ನೆಲೆ ಸರ್ವ ಸಮುದಾಯಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಜಾತ್ಯಾತೀತ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದರು. ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಡವರ ಕಣ್ಣೀರು ಒರೆಸುವಾತನೇ ನಿಜವಾದ ಶ್ರೀಮಂತ. ಅಂತಹ ಶ್ರೀಮಂತಿಕೆಯ ಅಗತ್ಯವಿದೆ ಎಂದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಕಾರ್ಯಕ್ರಮ ಆಯೋಜಕ ವಜೀರ ಅಲಿ ಗೋನಾಳ ಇತರರು ಮಾತನಾಡಿದರು. ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಕುಕನೂರಿನ ಮಹಾದೇವ ದೇವರು, ಮುಸ್ಲಿಂ ಸಮುದಾಯದ ಗುರು ಸೈಯದ್ ಶಾ ಅಬ್ದುಲ್ ಖಾದ್ರಿ ಫೈಸನ್ ಪಾಷಾ ಸಾನ್ನಿಧ್ಯ ವಹಿಸಿದ್ದರು.

    ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ್ ಪತ್ತಾರ್, ಪ್ರಮುಖರಾದ ಡಾ.ರಿಷಬ್, ಜಗನ್ ಮೋಹನ್ ರಡ್ಡಿ, ಫಕೀರಪ್ಪ ಹೊಸಹೊಕ್ಕಲ್, ಅಮರಚಂದ್ ಜೈನ್, ರಾಜಕುಮಾರ ಕಾಟ್ವಾ, ಮಾಲತಿ ನಾಯಕ್ ಇತರರಿದ್ದರು. 30ಜೋಡಿ ನವಜೀವನಕ್ಕೆ ಕಾಲಿಟ್ಟರು.

    ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹವಿರಲಿ; ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ರಾಮಚಂದ್ರರಾವ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts