More

    ವೃತ್ತದ ಸುಣ್ಣ-ಬಣ್ಣಕ್ಕೆ 58 ಸಾವಿರ ರೂ. ಖರ್ಚು?

    ಕುಷ್ಟಗಿ: ಪಟ್ಟಣದಲ್ಲಿ ಬಸವೇಶ್ವರ ಮೂರ್ತಿ ಅಳವಡಿಸಿರುವ ಕಟ್ಟೆ ಹಾಗೂ ವೃತ್ತದ ಕಟ್ಟೆಗೆ ಅಲಂಕಾರ ಮಾಡಲು 58 ಸಾವಿರ ರೂ. ವ್ಯಯಿಸಲಾಗಿದೆ ಎಂದು ಪುರಸಭೆಯ ಖರ್ಚು-ವೆಚ್ಚದ ವಿವರದಲ್ಲಿ ನಮೂದಿಸಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

    ಪಟ್ಟಣದಲ್ಲಿ 2020ರ ಫೆ.20ರಂದು ಬಸವ ಭವನ ಉದ್ಘಾಟಿಸಲಾಯಿತು. ಭವನದ ಮುಂದೆ ಕಟ್ಟೆ ನಿರ್ಮಿಸಿ ಅದರ ಮೇಲೆ ಬಸವೇಶ್ವರ ಮೂರ್ತಿ ಅಳವಡಿಸಲಾಗಿದೆ. ಮೂರ್ತಿ ಹಾಗೂ ಕೆಳಗಿನ ಕಟ್ಟೆಯೂ ಸುಸಜ್ಜಿತವಾಗಿದೆ. 2022ರ ಅ.12ರಂದು ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ಕಾರ್ಯಕ್ರಮಕ್ಕೆಂದು ಪಟ್ಟಣಕ್ಕೆ ಆಗಮಿಸಿದ್ದಾಗ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದಾರೆಂದು ಕಟ್ಟೆ ಹಾಗೂ ಬಸವೇಶ್ವರ ವೃತ್ತದ ಕಟ್ಟೆಗೆ ಸುಣ್ಣ ಬಣ್ಣ ಹಚ್ಚಲಾಯಿತು. ಆದರೆ, ಸುಣ್ಣ ಬಣ್ಣ ಮಾಡಲು 58 ಸಾವಿರ ರೂ. ವ್ಯಯಿಸಿರುವುದು ಹಲವು ಅನುಮಾನ ಸೃಷ್ಟಿಸಿದೆ. ಪುರಸಭೆ ಅಂದಾಜಿಗಿಂತ ಹೆಚ್ಚು ಅನುದಾನ ಪೋಲು ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮುಖ್ಯಮಂತ್ರಿಗಳು ಪಟ್ಟಣಕ್ಕೆ ಆಗಮಿಸುತ್ತಾರೆಂದು ಬಸವೇಶ್ವರ ಮೂರ್ತಿ ಅಳವಡಿಸಿರುವ ಕಟ್ಟೆ ಹಾಗೂ ವೃತ್ತದ ಕಟ್ಟೆಗೆ ಸುಣ್ಣ ಬಣ್ಣ ಬಳಿಯಲಾಯಿತು. ಈ ಕಾಮಗಾರಿಗೆ 58 ಸಾವಿರ ರೂ. ಖರ್ಚಾಗಿದೆ. ಸಣ್ಣ ಪುಟ್ಟ ದುರಸ್ತಿಯನ್ನೂ ಮಾಡಲಾಗಿದೆ.
    | ಜಿ.ಕೆ. ಹಿರೇಮಠ, ಕುಷ್ಟಗಿ ಪುರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts