More

    ಯುವಕರು ರಕ್ತದಾನ ಮಾಡುವಂತೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಮನವಿ

    ಕುಷ್ಟಗಿ: ರಕ್ತದಾನಕ್ಕೆ ಯುವಕರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮನವಿ ಮಾಡಿದರು.

    ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಅಂಗವಾಗಿ ಬಿಜೆಪಿ ಯುವಮೋರ್ಚಾ, ಆರೋಗ್ಯ ಇಲಾಖೆ, ಸಂಜೀವಿನಿ ರಕ್ತ ನಿಧಿ ಕೊಪ್ಪಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಶಿಬಿರಕ್ಕೆ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವಂತರೆಲ್ಲರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

    ರಕ್ತದಾನದ ಬಗ್ಗೆ ಬಹಳಷ್ಟು ತಪ್ಪು ತಿಳಿವಳಿಕೆಗಳಿವೆ. ಇವ್ಯಾವೂ ಸತ್ಯವಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು. ಇದರಿಂದ ಜೀವ ಉಳಿಸಿದ ಪುಣ್ಯ ಬರುತ್ತದೆ ಎಂದರು.

    ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ಮಾತನಾಡಿ, ಶಿಬಿರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿರುವುದು ಖುಷಿ ನೀಡಿದೆ ಎಂದರು.

    ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡಿಗೇರಿ, ಪ್ರಮುಖರಾದ ಶಶಿಧರ್ ಕವಲಿ, ಅಮಿನುದ್ದೀನ್ ಮುಲ್ಲಾ, ಬಾಲಾಜಿ ಬಳಿಗಾರ, ಲಕ್ಷ್ಮಣ್ ಕಟ್ಟಿಹೊಲ, ಶರೀಫ್ ಪರಕಿ, ರಾಚಪ್ಪ ಮಾಟಲದಿನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts