More

    ಕಟ್ಟಡದ ಬಾಡಿಗೆ ಸಮರ್ಪಕ ಪಾವತಿಸಿ

    ಕುಷ್ಟಗಿ: ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ನೀಡಿದ್ದ ಕರೆಯ ಮೇರೆಗೆ ತಾಲೂಕಿನ ಅಂಗನವಾಡಿ ಕೇಂದ್ರಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಡಿಪಿಒ ಅಮರೇಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ಗುಡದೂರುಕಲ್ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ವಿಧವೆ ಇದ್ದು, ಗ್ರಾಮದ ಕೆಲವರು ಅವರನ್ನು ಅವಾಚ್ಯವಾಗಿ ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣವನ್ನು ಪ್ರತಿ ತಿಂಗಳು ತಪ್ಪದೆ ಕಟ್ಟಡದ ಮಾಲೀಕರ ಖಾತೆಗೆ ಜಮಾ ಮಾಡಬೇಕು. ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸಿ ಕುಂದುಕೊರತೆ ಆಲಿಸಬೇಕು. ತಾಲೂಕಿನ ಮುದೇನೂರು ವಲಯಕ್ಕೆ ಕಾಯಂ ಮೇಲ್ವಿಚಾರಕಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

    ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಲಾವತಿ ಮೇಣೆಧಾಳ, ಖಜಾಂಚಿ ಡಿ.ಪುಷ್ಪಾ, ಕಾರ್ಯದರ್ಶಿ ಉಮಾ ಅಂಗಡಿ, ಪದಾಧಿಕಾರಿಗಳಾದ ಶಶಿಕಲಾ ಹಸಬಿ, ಗೀತಾ ಎಸ್. ಕುಷ್ಟಗಿ, ರೇಣುಕಾ ಮನ್ನೇರಾಳ, ಸರಸ್ವತಿ ಮುದೇನೂರು, ವಿಜಯಲಕ್ಷ್ಮೀ ಕೋಳೂರು, ಪುಷ್ಪಾ ದೇಸಾಯಿ, ಜಯಶ್ರೀ ಆಶ್ರಿತ್, ಪರಿಮಳಾ ಪುರೋಹಿತ್, ಯಮನಮ್ಮ ಭೋವಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts