More

    ಶಾಲಾ ಆವರಣದೊಳಗೆ ಮದ್ಯಪಾನ ಮಾಡುವವರನ್ನು ಕಠಿಣ ಶಿಕ್ಷೆ: ಗ್ರಾಮಸ್ಥರಿಗೆ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಎಚ್ಚರಿಕೆ

    ಕುರುಗೋಡು : ಶಾಲಾ ಆವರಣದೊಳಗೆ ಮದ್ಯಪಾನ ಮಾಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.

    ತಾಲೂಕಿನ ಕ್ಯಾದಿಗೆಹಾಳು ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಪ್ರತಿ ಓಣಿಗಳಲ್ಲಿನ ಜನರು ತಮ್ಮ ಮನೆಯಂಗಳದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ನಿಂತ ನೀರು ಹಾಗೂ ರಸ್ತೆಯ ಕೆಸರಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದರು.

    ಸಭೆಯ ಮದ್ಯದಲ್ಲಿ ಗ್ರಾಮಸ್ಥರು ಶಾಲೆಗೆ ಶಿಕ್ಷಕರು ತಡವಾಗಿ ಬರುತ್ತಾರೆ. ಅದರಲ್ಲೂ ಶಾಲೆಯ ಮಕ್ಕಳಿಗೆ ಬಿಸಿಯೂಟದ ಸಮಸ್ಯೆ ಇದ್ದು, ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಗ್ರಾಮದ ಮುಖಂಡ ಶೇಖರ್, ಕೆ.ಗಾದಿಲಿಂಗಪ್ಪ ಮಾತನಾಡಿ, ಗ್ರಾಮದಲ್ಲಿ ಅದೆಷ್ಟೊ ಬಡ ಕುಟುಂಬಗಳು ನಿವೇಶನ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ನಿವೇಶನ ನೀಡಿ. ಗ್ರಾಮದ ಕೆಲವೆಡೆ ಸಿಸಿ ರಸ್ತೆ ಕಾಮಗಾರಿ ಬಾಕಿ ಇದ್ದು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
    ಇದಕ್ಕೆ ಗೆಣಿಕೆಹಾಳು ಗ್ರಾಪಂ ಪಿಡಿಒ ತಿಮ್ಮಪ್ಪ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಗ್ರಾಪಂದಲ್ಲಿ ನಡೆಯುವ ಸಭೆಯಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸಿ ಕಾಮಗಾರಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ನಂತರ ಗ್ರಾಮದಲ್ಲಿ ಹಳೆ ವಿದ್ಯುತ್ ಕಂಬಗಳನ್ನು ತೆರೆವುಗೊಳಿಸಿ, ಹೊಸಕಂಬಗಳನ್ನು ಅಳವಡಿಸಬೇಕು, ಸಕಾಲಕ್ಕೆ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ವವಸ್ಥೆ ಸರಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.

    ಸಭೆಯಲ್ಲಿ 597 ಅರ್ಜಿ ಸಲ್ಲಿಕೆಯಾಗಿದ್ದು, 512 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಯಿತು. ಗೆಣಿಕೆಹಾಳು ಗ್ರಾಪಂ ಅಧ್ಯಕ್ಷೆ ವಿ.ಎಸ್.ರಾಮಲಿಂಗಮ್ಮ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲಾ, ಎಡಿ. ಶಿವರಾಮರೆಡ್ಡಿ, ವೈದ್ಯಾಧಿಕಾರಿ ಶ್ರೀಕರ ಗೌಡ, ಕೃಷಿ ಅಧಿಕಾರಿ ಎಂ.ದೇವರಾಜ, ಬಿಇಒ ವೆಂಕಟೇಶ್ ರಾಮಚಂದ್ರಪ್ಪ, ವಿಎ ಕೊಟ್ರೇಶ್‌ನಾಯಕ್, ವಿಎ ವೀರೇಶ, ಎಎಸ್‌ಐ ಹೂವಣ್ಣ, ತೋಟಗಾರಿಕಾ ಇಲಾಖೆ ಅಧಿಕಾರಿ ವಿರೂಪಾಕ್ಷ, ಕಾರ್ಮಿಕ ಇಲಾಖೆ ನಿರೀಕ್ಷಕ ರವಿದಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts