More

    ಡಿಜಿಟಲೀಕರಣದಿಂದ ಜನರಿಗೆ ಅನುಕೂಲ

    ಕುರುಗೋಡು: ಮುಟೇಷನ್, ಇನಾಂ, ಭೂ ಪರಿವರ್ತನೆ, ಪಹಣಿ, ಹಕ್ಕುಪತ್ರ, ನಕ್ಷೆ ಇತರ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.

    ತಾಲೂಕು ಕಚೇರಿಯಲ್ಲಿ ಸೋಮವಾರ ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣಗೊಳಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ವಿಶೇಷವಾಗಿ ಕಂಪ್ಲಿ ಕ್ಷೇತ್ರದ ಕುರುಗೋಡಿನಲ್ಲಿ ಪ್ರಥಮ ಬಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.

    ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಮಾತನಾಡಿ, ಹಳೆಯ ಜಮೀನಿನ ದಾಖಲೆಗಳು ಇನ್ಮುಂದೆ ಡಿಜಿಟಲೀಕರಣದಿಂದ ಸಾರ್ವಜನಿಕರಿಗೆ ಸರಳ ಹಾಗೂ ಸುಲಭವಾಗಿ ಮೊಬೈಲ್‌ಗಳಲ್ಲಿ ವೀಕ್ಷಿಸಲು ಸಹಕಾರಿಯಾಗುತ್ತದೆ. ಮುಂದಿನ ನೂರು ದಿನಗಳಲ್ಲಿ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ರೂಪದಲ್ಲಿ ಪಡೆಯಬಹುದು ಎಂದು ಹೇಳಿದರು. ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಉಪ ತಹಸೀಲ್ದಾರ್ ಮಲ್ಲೇಶಪ್ಪ, ಅಧಿಕಾರಿಗಳಾದ ವಿಜಯಕುಮಾರ್, ಸುರೇಶ್ ಇತರರಿದ್ದರು.

    ಕುರುಗೋಡು ತಾಲೂಕು ಕಚೇರಿಯಲ್ಲಿ ದಾಖಲೆಗಳ ಡಿಜಿಟಲೀಕರಣ ಯೋಜನೆಗೆ ಶಾಸಕ ಗಣೇಶ್ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಉಪ ತಹಸೀಲ್ದಾರ್ ಮಲ್ಲೇಶಪ್ಪ, ತಾಪಂ ಅಧಿಕಾರಿ ನಿರ್ಮಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts