More

    ಅನ್ನದಾಸೋಹದಲ್ಲಿ ವೀರಶೈವ ಮಠಗಳು ಮುಂದೆ: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರ ಹೇಳಿಕೆ

    ಕುರುಗೋಡು: ಅನ್ನ ದಾಸೋಹ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕಾಯಕದಲ್ಲಿ ವೀರಶೈವ ಮಠಗಳು ಸದಾ ಮುಂದಿರುತ್ತವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಶ್ರೀಶೈಲ ಪೀಠದ ಶ್ರೀ ರಾಘವಾಂಕ ಸ್ವಾಮಿ (ಹಾವಗಿ) ಶಾಖಾ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ.ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯರ ಗದ್ದುಗೆಗೆ ರುದ್ರಾಭಿಷೇಕ, ಮಂಡಲ ಪೂಜೆಯ ಮಂಗಲ ಹಾಗೂ ಸೂಗೂರೇಶ್ವರ ಪಂಡಿತಾರಾಧ್ಯ ಶಿವಾಚಾರ್ಯರ ಗುರು ಪಟ್ಟಾಧಿಕಾರ ಸಮಾರಂಭದಲ್ಲಿ ಮಾತನಾಡಿದರು. ನೂತನ ಶ್ರೀಗಳ ಪಟ್ಟಾಭಿಷೇಕವಾಗಿದ್ದು, ಪ್ರತಿದಿನ ಮಠದಲ್ಲಿ ಅನ್ನ ದಾಸೋಹ ನಡೆಯಲಿದೆ. ಮಠದ ದಾಸೋಹ ನಿಧಿಗೆ 25 ಸಾವಿರ ರೂ. ಶ್ರೀಶೈಲ ಪೀಠ ನೀಡುವ ಮೂಲಕ ಅನ್ನ ದಾಸೋಹಕ್ಕೆ ಚಾಲನೆ ನೀಡಿದ್ದು, ಇಂಥ ಮಹಾಕಾರ್ಯಕ್ಕೆ ಆರ್ಥಿಕ ಸ್ಥಿತಿವಂತರು ಕೈ ಜೋಡಿಸಬೇಕು ಎಂದರು.

    ಕೆಲ ಮಠಗಳು ಮಠದ ಆರ್ಥಿಕ ಭದ್ರತೆಗೆ ಸಮಾಜದ ಒಳಿತನ್ನು ಮರೆಯುತ್ತಾರೆ. ಇನ್ನೂ ಕೆಲವು ಮಠಗಳ ಮಠಾಧೀಶರು ಸಮಾಜದ ಏಳಿಗೆ ಜತೆಗೆ ಮಠವನ್ನೂ ಭದ್ರಗೊಳಿಸಲು ಮುಂದಾಗಿದ್ದಾರೆ. ಅದೇ ರೀತಿ ಈ ಮಠದ ನೂತನ ಸ್ವಾಮೀಜಿ ಎರಡು ಕಡೆ ಗಮನಹರಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸಬೇಕು. ಸಂಸಾರಿಗಳು ಮನೆ ಹಾಗೂ ಮಕ್ಕಳಿಗಾಗಿ ಹಣ, ಆಸ್ತಿ ಮಾಡಲು ದುಡಿಯುತ್ತಾರೆ. ಆದರೇ ಮಠಾಧೀಶರು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಾರೆ ಎಂದರು.

    ನೂತನ ಮಠಾಧೀಶ ಸೂಗೂರೇಶ್ವರ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಹಿಂದಿನ ಶ್ರೀಗಳಂತೆ ಮಠವನ್ನು ಭದ್ರ ಪಡಿಸಿ ಹಾಗೂ ಸಮಾಜ ಕಟ್ಟುವ ಕೆಲಸ ಮಾಡುತ್ತೇನೆ. ಹಿರಿಯ ಶ್ರೀಗಳು ನಮ್ಮಿಂದ ಕೇವಲ ದೈಹಿಕವಾಗಿ ದೂರವಾಗಿದ್ದು, ಅವರ ಶಕ್ತಿ, ಸಂಕಲ್ಪ, ಯೋಚನೆಗಳು ಯಾವಾಗಲೂ ಗದ್ದುಗೆಯಲ್ಲಿಯೇ ಇರುತ್ತವೆ ಎಂದು ಹೇಳಿದರು.

    ಉಜ್ಜಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶಹಾಪುರ ಗುಮಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು, ದೋರನಹಳ್ಳಿ ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯರು, ಲಕ್ಷ್ಮೀಪುರದ ಮಲ್ಲಿಕಾರ್ಜುನ ಶಿವಾಚಾರ್ಯರು, ಚಟ್ನಳ್ಳಿ ವಿಶ್ವಾರಾಧ್ಯ ದೇವರು, ಲೋಕಾಪುರದ ಮಹಾಂತ ದೇವರು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯರು, ಕೆ.ಅಯ್ಯನಹಳ್ಳಿಯ ಡಾ.ಮಹೇಶ್ವರ ಶಿವಾಚಾರ್ಯರು, ಕೊಟ್ಟೂರಿನ ಡಾ.ಸಿದ್ಧಲಿಂಗ ಶಿವಾಚಾರ್ಯರು, ನಂದಿಪುರದ ಡಾ.ಮಹೇಶ್ವರ ಶ್ರೀಗಳು, ಬೆಣ್ಣಿಹಳ್ಳಿಯ ಪಂಚಾಕ್ಷರ ಶಿವಾಚಾರ್ಯರು ಬೆಣ್ಣಿಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts