More

    ಕುಣಿಗಲ್ ಗದ್ದುಗೆಗಾಗಿ ಪೈಪೋಟಿ ; 9ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ

    ಕುಣಿಗಲ್: ನ್ಯಾಯಾಲಯದ ತಡೆಯಾಜ್ಞೆಯಿಂದ ಸ್ಥಗಿತಗೊಂಡಿದ್ದ ಕುಣಿಗಲ್ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ನ.9ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ವಿ.ಆರ್.ವಿಶ್ವನಾಥ್ ಘೋಷಿಸಿದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸದಸ್ಯರಲ್ಲಿ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
    23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 14, ಬಿಜೆಪಿ 4, ಜೆಡಿಎಸ್ 3 ಹಾಗೂ ಪಕ್ಷೇತರು 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅಧಿಕಾರ ಗದ್ದುಗೆ ಏರಲು 12 ಸದಸ್ಯರ ಅಗತ್ಯವಿದ್ದು, ಇಬ್ಬರು ಪಕ್ಷೇತರರು, ಜೆಡಿಎಸ್‌ನ ಒಬ್ಬ ಸದಸ್ಯೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ.

    ರೇಸ್‌ನಲ್ಲಿ ಐವರು: ಅಧ್ಯಕ್ಷ ರೇಸ್‌ನಲ್ಲಿ ರಂಗಸ್ವಾಮಿ, ಬಿ.ಎನ್.ಅರುಣ್‌ಕುಮಾರ್, ಸೆಮಿವುಲ್ಲಾ, ನಾಗೇಂದ್ರ, ರಾಮು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಆರ್.ಜಯಲಕ್ಷ್ಮೀ, ಮಂಜುಳಾ, ಕೆ.ಎಂ.ಆಸ್ಮಾ, ಪಕ್ಷೇತರ ಸದಸ್ಯೆ ರೂಪಿಣಿ ಆಕಾಂಕ್ಷಿಯಾಗಿದ್ದಾರೆ.

    ಆಮಿಷ: ಅಧ್ಯಕ್ಷ ಆಗಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಸದಸ್ಯರು ಈ ದಿಸೆಯಲ್ಲಿ ಸದಸ್ಯರನ್ನು ಸೆಳೆಯಲು ಕಾರು, ಹಣ, ಪ್ರವಾಸದ ಆಮಿಷ ಒಡ್ಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಸದ್ಯರೊಬ್ಬರು ತಿಳಿಸಿದ್ದಾರೆ.

    ಜಾತಿ ರಾಜಕೀಯ: ಜೆಡಿಎಸ್‌ನ ಒಕ್ಕಲಿಗ ಸಮುದಾಯದ ಕೆ.ಎಲ್.ಹರೀಶ್ ಅಧ್ಯಕ್ಷರಾಗಿದ್ದನ್ನು ಹೊರತುಪಡಿಸಿದರೆ ಕಳೆದ 15 ವರ್ಷಗಳಿಂದ ಕಾಂಗ್ರೆಸ್‌ನ ಯಾವೊಬ್ಬ ಸದಸ್ಯನೂ ಅಧ್ಯಕ್ಷರಾಗಿಲ್ಲ. ಹಾಗಾಗಿ ಈ ಬಾರಿ ಒಕ್ಕಲಿಗ ಸಮುದಾಯದ ಬಿ.ಎನ್.ಅರುಣ್‌ಕುಮಾರ್ ಅಥವಾ ಎಸ್.ಕೆ.ನಾಗೇಂದ್ರ ಅವರನ್ನು ಆಯ್ಕೆ ಮಾಡಬೇಕು ಎಂದು ಕುಣಿಗಲ್ ಶಾಸಕರ ಮೇಲೆ ಪಕ್ಷದ ಹಿರಿಯ ಮುಖಂಡರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts