More

    ನೋಡುಗರ ಗಮನಸೆಳೆದ ಕುಂಡ್ಯೋಳಂಡ ಕಪ್

    ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ
    ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ಅಳ್ತಂಡ, ಬೋಳಿಯಾಡಿರ ವಿರುದ್ಧ,
    ಮಂಜಂಡ, ಪೊನ್ನ ಕಚ್ಚಿರ ತಂಡಗಳ ವಿರುದ್ಧ 1- 0 ಅಂತರದಲ್ಲಿ ಗೆಲುವು ಸಾಧಿಸಿದವು. ಬಡ್ಡೀರ ಚಾರಿಮಂಡದ ವಿರುದ್ಧ, ಕಾಲಚಂಡ ಬೊಳ್ಳಚೆಟ್ಟೀರ ತಂಡಗಳ ವಿರುದ್ಧ 1- 0 ಅಂತರದ ಗೆಲುವು ಸಾಧಿಸಿದವು.

    ಕಳ್ಳೀರ ತಂಡವು ಮುಕ್ಕಾಟಿರ( ಕುಂಜಲಗೇರಿ) ತಂಡದ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರೆ ಬಡ್ಡಿರ ಚಾರಿಮಂಡ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು. ಕುಂಡಚ್ಚಿರ ತಂಡವು ಮಾಪಂಗಡ ತಂಡದ ವಿರುದ್ಧ 2-1 ಅಂತರದ ಸೋಲನ್ನನುಭವಿಸಿತು. ಕಾಲಚಂಡ ಬೊಳ್ಳ ಚೆಟ್ಟಿರ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದರೆ ಮಲ್ಲಜ್ಜಿರ ಪೆಬ್ಬೆಟ್ಟಿರ ವಿರುದ್ಧ ಭರ್ಜರಿ ಜಯ ಸಾಧಿಸಿತು. ಮಲ್ಲಜ್ಜಿರ ತಂಡದ ಆಟಗಾರರು 5 ಗೋಲು ಗಳಿಸಿದರೆ ಪೆಬ್ಬಟ್ಟಿರ ತಂಡದ ಆಟಗಾರರು ಯಾವುದೇ ಗೋಲು ಗಳಿಸಲಿಲ್ಲ. ಉಳಿದಂತೆ ಸಿದ್ದಂಡ ವಿರುದ್ಧ ನಿಡುಮಂಡ, ಆಪಾ.ಡಂಡ ವಿರುದ್ಧ ದಾಸಂಡ ಗೆಲುವು ಸಾಧಿಸಿದವು. ದಾಸಂಡ 3- 0 ಅಂತರದಿಂದ ಗೆಲುವು ಸಾಧಿಸಿತು. ಅಜ್ಜೆಟ್ಟಿರ ಮತ್ತು ಬಟ್ಟಿರ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ಬಳಿಕ ಟೈ ಬ್ರೇಕರ್ ನಲ್ಲಿ ಅಜ್ಜೆಟ್ಟಿ ಮೋಹನ್ 3 ಗೋಲು ಗಳಿಸಿದರೆ ಬಟ್ಟೀರ ಬೋಜಣ್ಣ ಮತ್ತು ಬೋಪಣ್ಣ ತಲಾ ಒಂದು ಗೋಲು ಗಳಿಸಿದರು. ಪಟ್ಟಚೆರುವಾಳಂಡ ಮತ್ತು ಮಳವಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು.ಟೈ ಬ್ರೇಕರ್‌ನಲ್ಲಿ ಪಟ್ಟಚೆರುವಾಳಂಡ 5-4 ಅಂತರದಿಂದ ಮಳವಂಡ ತಂಡದ ವಿರುದ್ಧ ಗೆಲುವು ಸಾಧಿಸಿತು ಮುಕ್ಕಾಟಿರ (ಕುಂಬಳದಾಳು) ತಂಡವು ತಿರುತೆರ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.

    ಮಲ್ಲಂಡ ಬಾಚಿರ ವಿರುದ್ಧ 3-0 ಅಂತರದಿಂದ ಜಯ ಗಳಿಸಿತು. ಮಂಗೇರ ವಿರುದ್ಧ ಕೊಟ್ಟಂಗಡ ಮುಂದಿನ ಸುತ್ತು ಪ್ರವೇಶಿಸಿತು. ಮಚ್ಚಾರಂಡ ಐಮುಡಿಯಂಡ ವಿರುದ್ಧ ಜಯ ಸಾಧಿಸಿತು. ದೇಯಂಡ ಓಡಿಯಂಡ ವಿರುದ್ಧ ಟೈಬ್ರೇಕರ್ ನಲ್ಲಿ 3-2 ಅಂತರದಿಂದ ಗೆದ್ದು ಮುಂದಿನ ಸುತ್ತು ಪ್ರವೇಶಿಸಿತು. ಉಳಿದಂತೆ ಪಳಂಗಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts