More

    ಮೇರಿಯಂಡ, ಕುಪ್ಪಂಡ ನಡುವೆ ಭರ್ಜರಿ ಸೆಣೆಸಾಟ


    ದುಗ್ಗಳ ಸದಾನಂದ ನಾಪೋಕ್ಲು
    ಇಲ್ಲಿಯ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶನಿವಾರದ ಪಂದ್ಯಗಳಲ್ಲಿ ಮೇರಿಯಂಡ ಮತ್ತು ಕುಪ್ಪಂಡ ಧ್ಯಾನ ತಂಡಗಳ ನಡುವೆ ಭರ್ಜರಿ ಸೆಣೆಸಾಟ ನಡೆಯಿತು.


    ಕುಪ್ಪಂಡ ಧ್ಯಾನ್ ತಂಡ ಮೊದಲ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ, ಕುಪ್ಪಂಡ ಸೋಮಯ್ಯ ಎಂಟನೇ ನಿಮಿಷದಲ್ಲಿ ಎರಡನೇ ಗೋಲನ್ನು ಹಾಗೂ 13 ನಿಮಿಷದಲ್ಲಿ ಮೂರನೇ ಗೋಲನ್ನು ದಾಖಲಿಸಿ ಮುನ್ನಡೆ ಸಾಧಿಸಿದರು. ಮೇರಿಯಂಡ ತಂಡದ ಪವನ್ 14ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ, ಕುಪ್ಪಂಡ ಸೋಮಯ್ಯ 21ನೇ ನಿಮಿಷದಲ್ಲಿ ನಾಲ್ಕನೇ ಗೋಲನ್ನು ತಂಡದ ಪರವಾಗಿ ದಾಖಲಿಸಿದರು.

    ಕರುಣ್ 22 ನಿಮಿಷದಲ್ಲಿ ಚಂಗಪ್ಪ, 30 ನಿಮಿಷದಲ್ಲಿ ಸರಾಗವಾಗಿ ಗೋಲು ಹೊಡೆದು ಏಳು ಗೋಲುಗಳನ್ನು ತಂಡಕ್ಕೆ ಗಳಿಸಿಕೊಟ್ಟರು. ಮೇರಿಯಂಡ ನಿಖಿಲ್ 37 ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡ ಕೇವಲ ಮೂರು ಗೋಲು ಗಳಿಸಿತು. ಕುಪ್ಪಂಡ ತಂಡಕ್ಕೆ ಮೇರಿಯಂಡ ತಂಡದ ವಿರುದ್ಧ 7-3 ಅಂತರದ ಜಯ ಲಭಿಸಿತು.
    ಉಳಿದಂತೆ ಮೇಚಿಯಂಡ ತಂಡ, ಕುಲ್ಲಚಂಡ ತಂಡದ ವಿರುದ್ಧ 2-1 ಅಂತರದಲ್ಲಿ ಕಲಿಯಂಡ ತಂಡ ಕನ್ನಂಡ ತಂಡದ ವಿರುದ್ಧ 1-0 ಅಂತರದಲ್ಲಿ, ಬೊವ್ವೇರಿಯಂಡ ತಂಡ ಅಪ್ಪನೆರವಂಡ ತಂಡದ ವಿರುದ್ಧ 4-1 ಅಂತರದಲ್ಲಿ, ಮಾತ್ರಂಡ ತಂಡ ಕೊಟ್ಟಂಗಡ ತಂಡದ ವಿರುದ್ಧ 4- 0 ಅಂತರದಲ್ಲಿ, ಚೇಂದಿರ ತಂಡ ಸಣ್ಣವಂಡ ತಂಡದ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿತು.


    ಚೇಂದಂಡ ತಂಡ, ಚೀಯಕ ಪೂವಂಡ ತಂಡದ ವಿರುದ್ಧ 4-0 ಅಂತರದಲ್ಲಿ, ಕರಿನೆರವಂಡ ತಂಡ ಪಾಡೆಯಂಡ ತಂಡದ ವಿರುದ್ಧ 6- 1 ಅಂತರದಲ್ಲಿ, ಐಚೆಟ್ಟಿರ ತಂಡ ಕೊಳ್ಳಿರ ತಂಡ ವಿರುದ್ಧ 3-2 ಅಂತರದಲ್ಲಿ, ಕೇಲೆಟಿರ ತಂಡ ಕಡೇಮಾಡ ತಂಡದ ವಿರುದ್ಧ 4-2 ಅಂತರದಲ್ಲಿ, ನಾಪಂಡ ತಂಡ ನಂಬುಡಮಾಡ ತಂಡದ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿದವು.

    ನಾಳಿನ ಪಂದ್ಯಗಳು
    ಮೈದಾನ ಒಂದು
    9 ಗಂಟೆಗೆ ಚೇನಂಡ-ಚೆಕ್ಕೇರ
    10 ಗಂಟೆಗೆ ಕುಲ್ಲೇಟಿರ-ಕೊಕ್ಕಂಡ
    11 ಗಂಟೆಗೆ ಮಂಡೇಪಂಡ-ಐನಂಡ
    1 ಗಂಟೆಗೆ ಬಾಳೆಯಡ-ಚೆಪ್ಪುಡಿರ
    ಮೈದಾನ ಎರಡು
    9 ಗಂಟೆಗೆ ಪುಲ್ಲಂಗಡ-ಪುದಿಯೊಕ್ಕಡ
    10 ಗಂಟೆಗೆ ಕಂಬೀರಂಡ-ಚೇಂದಂಡ
    11 ಗಂಟೆಗೆ ಚೋಯಮಾಡಂಡ-ಕರಿನೆರವಂಡ
    1 ಗಂಟೆಗೆ ಬೊವ್ವೇರಿಯಂಡ-ಚೇಂದಿರ
    2 ಗಂಟೆಗೆ ಐಚೆಟ್ಟಿರ-ಕೇಲೇಟಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts