More

    ಕುಂದಗನ್ನಡ ಜಿಲ್ಲೆ ರಚನೆಗೆ ಹೋರಾಟ

    ಕುಂದಾಪುರ: ಕುಂದಾಪುರ ಜಿಲ್ಲೆ ಆಗಬೇಕು ಎನ್ನುವ ಹೋರಾಟಕ್ಕೆ ಮತ್ತಷ್ಟು ವೇಗ ಸಿಕ್ಕಿದ್ದು, ಬುಧವಾರ ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಹೋರಾಟ ರೂಪುರೇಷೆ ಬಗ್ಗೆ ಸುದೀರ್ಘ ಚರ್ಚೆ ನಡೆದು ಹೋರಾಟ ಸಮಿತಿ ರಚಿಸಲಾಗಿದೆ.
    ಕುಂದಗನ್ನಡ ಜಿಲ್ಲೆ ಸ್ಥಾಪನೆ ಕುರಿತು ಬೈಂದೂರು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರ ಜಿಲ್ಲಾ ಹೋರಾಟ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಕೂಡ ನಡೆಯಿತು.
    ಅಪ್ಪಣ್ಣ ಹೆಗ್ಡೆ ನೇತೃತ್ವದಲ್ಲಿ ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾಗಿ ಮುಂಬಾರು ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಜಿಪಂ ಮಾಜಿ ಸದಸ್ಯ ಗಣಪತಿ ಶ್ರೀಯಾನ್, ಉಪಾಧ್ಯಕ್ಷರಾಗಿ ದಸ್ತಗೀರಿ ಸಾಹೇಬ್ ಕಾವ್ರಾಡಿ, ತಾಪಂ ಮಾಜಿ ಸದಸ್ಯ ಸತೀಶ್ ಎಂ.ನಾಯ್ಕ ನಾಡಗುಡ್ಡೆಯಂಗಡಿ, ನವೀನ ಚಂದ್ರ ಶೆಟ್ಟಿ ಬೆಳ್ಳೂರು, ರತ್ನಾಕರ ಶೆಟ್ಟಿ ಆವರ್ಸೆ, ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿನಯ ಶೇಟ್ ಕಾವ್ರಾಡಿ, ಕೆ.ಆರ್.ನಾಯ್ಕ ಹಂಗಳೂರು, ಡಾ.ಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಹರ್ಕೂರು ಅವರನ್ನು ಸಮಿತಿಗೆ ನೇಮಕ ಮಾಡಿಕೊಳ್ಳಲಾಯಿತು.
    ಚಿಟ್ಟೆ ರಾಜಗೋಪಾಲ ಹೆಗ್ಡೆ ಮಾತನಾಡಿ, ಭಟ್ಕಳ ಶಾಸಕ ಸುನೀಲ್ ನಾಯ್ಕ ಅವರ ಜತೆ ಈಗಾಗಲೇ 2, 3 ಬಾರಿ ಮಾತನಾಡಿದ್ದು, ಭಟ್ಕಳ ತಾಲೂಕಿಗೆ ಜಿಲ್ಲಾ ಕೇಂದ್ರ ಕಾರವಾರ 178 ಕಿ.ಮೀ. ದೂರವಿದೆ. ಭಟ್ಕಳ ಜನತೆ, ಶಾಸಕರು ಭಟ್ಕಳವನ್ನು ಸೇರಿಸಿ ಕುಂದಾಪುರ ಜಿಲ್ಲೆ ರಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
    ಸಂಚಾಲಕ ಮುಂಬಾರು ದಿನಕರ ಶೆಟ್ಟಿ ಮಾತನಾಡಿದರು. ಗಣಪತಿ ಶ್ರೀಯಾನ್ ದಸ್ತಗೀರಿ ಸಾಹೇಬ್, ನಾಡ ಸತೀಶ್ ನಾಯ್ಕ, ಬಿ.ಅಪ್ಪಣ್ಣ ಹೆಗ್ಡೆ, ಅನಿಲ್ ಕುಮಾರ ಶೆಟ್ಟಿ ಕುಂದಾಪುರ ಜಿಲ್ಲೆ ರಚನೆ ಅನಿವಾರ್ಯ ಹಾಗೂ ಅಗತ್ಯದ ಕುರಿತು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts