More

    ಶಾಂತಿಕಾ ಪರಮೇಶ್ವರಿದೇವಿ ಬಂಡಿಹಬ್ಬ

    ಕುಮಟಾ: ಪಟ್ಟಣದ ಗ್ರಾಮದೇವಿ ಭೂಮಿದೇವತೆ ಅಮ್ಮನವರೆಂದೇ ಖ್ಯಾತವಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ವಾರ್ಷಿಕ ಬಂಡಿಹಬ್ಬ ವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
    ಏ. 25ರಿಂದ ಆರಂಭವಾದ ಬಂಡಿಹಬ್ಬದ ವಿವಿಧ ಕಾರ್ಯಕ್ರಮಗಳಲ್ಲಿ ಕಲಶಕಟ್ಟುವಿಕೆಯಿಂದ ಶುರುವಾಗಿ ಮಾರಿಕಾಂಬೆಯ ಆಹ್ವಾನ, ಉತ್ಸವ, ಹಗರಣ, ನಗರೋತ್ಸವದೊಟ್ಟಿಗೆ ಕಲಶಗಳು, ಮುಖವಾಡ ಕುಣಿತದೊಂದಿಗೆ ಜರುಗಿತು. ಕಲಶದ ಮೆರವಣಿಗೆಯುದ್ದಕ್ಕೂ ಭಕ್ತಾದಿಗಳು ಕಲಶಕ್ಕೆ ಕಾಣಿಕೆ ಸಮರ್ಪಿಸಿದರು. ರಾತ್ರಿ ಕಲಶದವರೊಟ್ಟಿಗೆ, ಕಟ್ಟಿಗೆಯವರು ದೇವಪಾತ್ರಧಾರಿಗಳು ಕೆಂಡ ಹಾಯುವ ಸನ್ನಿವೇಶ ಭಕ್ತರನ್ನು ರೋಮಾಂಚನಗೊಳಿಸಿತು. ದೇವಾಲಯದ ಅರ್ಚಕ ಗುನಗರು, ಮೊಕ್ತೇಸರ ಕೃಷ್ಣ ಪೈ ಹಾಗೂ ಆಡಳಿತ ಮಂಡಳಿಯವರು ಬಂಡಿಹಬ್ಬದ ಯಶಸ್ಸಿಗೆ ಶ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts