More

    ವಿಶ್ವಕಪ್​ ಸೋತರೂ ನಿರಾಸೆಗೊಳ್ಳದೇ ಮೈದಾನದಲ್ಲೇ ನಗು ಬೀರಿದ್ದರ ಬಗ್ಗೆ ಕೊನೆಗೂ ಮಾತನಾಡಿದ ಸಂಗಾಕ್ಕರ!

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ 2011ನೇ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಸಿಕ್ಸರ್​ ಸಿಡಿಸುವ ಮೂಲಕ ಶ್ರೀಲಂಕಾ ಎದುರು ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಮೂಲಕ ಐತಿಹಾಸಿಕ ಟ್ರೋಫಿಯನ್ನು ಭಾರತ ಎರಡನೇ ಬಾರಿಗೆ ಎತ್ತಿ ಹಿಡಿದಿತ್ತು. ಆದರೆ, ಪಂದ್ಯವನ್ನು ಕೈಚೆಲ್ಲಿದರೂ ಸಹ ಲಂಕಾ ಮಾಜಿ ನಾಯಕ ಕುಮಾರ್​ ಸಂಗಕ್ಕರ ಬೀರಿದ್ದ ನಗೆ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿಯೇ ಉಳಿದಿತ್ತು. ಇದೀಗ ಅವರೇ ಆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಅಶ್ಲೀಲ ವಿಡಿಯೋ ಹಾಕುತ್ತಿದ್ದ ಬಾಲಕ ಏನಾದ ಗೊತ್ತಾ?

    ಸ್ಪಿನ್​ ಮಾಂತ್ರಿಕ ಆರ್.ಅಶ್ವಿನ್ ಜತೆಗೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಸಂವಹನ ನಡೆಸಿದ ಸಂಗಾಕ್ಕರ ಅನೇಕ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು. ಅಂದು ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಲಂಕಾ 275 ರನ್​ಗಳ ಸವಾಲಿನ ಮೊತ್ತ ಕಲೆ ಹಾಕಿದರು ಸಹ ಟೀಮ್​ ಇಂಡಿಯಾದ ಸಂಘಟಿತ ಪ್ರದರ್ಶನದ ಮುಂದೆ ಶರಣಾಯಿತು.

    ಎಂದಿನಂತೆ ತಮ್ಮ ಶೈಲಿಯಲ್ಲಿ ಧೋನಿ ಸಿಕ್ಸರ್​ ಬಾರಿಸುವ ಮೂಲಕ ವಿಜಯ ಪತಾಕೆ ಹಾರಿಸಿದ್ದರು. ಈ ವೇಳೆ ಕ್ರೀಸ್​ನಲ್ಲಿ ಉಳಿದಿದ್ದ ಧೋನಿ ಮತ್ತು ಯುವರಾಜ್​ ಸಿಂಗ್​ ಪರಸ್ಪರ ಅಪ್ಪಿಕೊಂಡು ವಿಜಯೋತ್ಸವ ಆಚರಿಸುವಾಗ ಪಕ್ಕದಲ್ಲೇ ನಿಂತಿದ್ದ ಸಂಗಕ್ಕರ ಸಣ್ಣದಾಗಿ ನಗು ಬೀರುತ್ತಿದ್ದರು.

    ಈ ಬಗ್ಗೆ ಮಾತನಾಡಿದ ಸಂಗಕ್ಕರ ಫೈನಲ್​ ಸೋತೆವು ಎಂಬ ದುಃಖ ಹಾಗೂ ನಿರಾಶೆಯನ್ನು ನನ್ನ ನಗು ಮರೆಮಾಚಿತು. ಅದು ನನ್ನ ನಗುವಲ್ಲ ಶ್ರೀಲಂಕಾ ಜನರ ದುಃಖದ ಪ್ರತಿಬಿಂಬವಾಗಿತ್ತು ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಸಂಗಕ್ಕರ ಮಾತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಇದು ನಿಜಕ್ಕೂ ಕ್ರೀಡಾ ಸ್ಪೂರ್ತಿಯಾಗಿದೆ. ಕ್ರೀಡೆಯ ಓರ್ವ ಶ್ರೇಷ್ಠ ರಾಯಭಾರಿ ಎಂಬುದನ್ನು ಸಂಗಕ್ಕರ ಅವರು ನಿರೂಪಿಸಿದರು ಎಂದು ಕೊಂಡಾಡಿದ್ದಾರೆ.

    ಇದನ್ನೂ ಓದಿ: ಗ್ರಾಮೀಣ ಜನ ಶಿಸ್ತಿನ ಸಿಪಾಯಿಗಳು: ಸಚಿವ ಕೆ.ಎಸ್. ಈಶ್ವರಪ್ಪ ಬಣ್ಣನೆ

    ಮುಂದುವರಿದು ಮಾತನಾಡಿರುವ ಸಂಗಕ್ಕರ ಅಂದು ಇಂಡಿಯಾ ಬ್ಯಾಟಿಂಗ್​ ಆರ್ಡರ್​ ನೋಡಿದರೆ ಅವರಿಗೆ 350 ರನ್​ ಕೂಡ ಏನೇನು ಅಲ್ಲ ಎಂದೆನಿಸಿತ್ತು. ಶ್ರೀಲಂಕಾದಲ್ಲಿ ಹುಟ್ಟಿದ ನಾನು ನನ್ನ ಜೀವನದಲ್ಲಿ ಹಲವರು ಅಡೆತಡೆಗಳನ್ನು ನೋಡಿದ್ದೇನೆ. 30 ವರ್ಷದಲ್ಲಿ ತುಂಬಾ ಶ್ರಮ ಪಟ್ಟಿದ್ದೇನೆ. 2005ರಲ್ಲಿ ಎದುರಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಸಮಸ್ಯೆಗಳು ಲಂಕಾವನ್ನು ಬಾಧಿಸಿದೆ. ಆದರೆ, ಎಂದಿಗೂ ಲಂಕಾ ಧೃತಿಗೆಡಲಿಲ್ಲ. ಈ ಗುಣ ಲಂಕಾದಲ್ಲಿ ಜನ್ಮಜಾತವಾಗಿದೆ. ನಾವು ಆಡುವಾಗ ಗೆಲವು ನಮ್ಮದಾಗಿಸಿಕೊಳ್ಳಬೇಕೆಂದೆ ತುಂಬಾ ಪೈಪೋಟಿ ನೀಡಿದ್ದೇವೆ. ಅದು ಗೆಲುವು ಅಥವಾ ಸೋಲಾಗಿರಬಹುದು ಸಮಸ್ಥಿತಿಯನ್ನು ಕಾಪಾಡಿಕೊಂಡಿದ್ದೇವೆ ಎಂದು ತಿಳಿಸಿದರು.

    1996ರ ನಂತರ ಇನ್ನೊಂದು ಬಾರಿ ಟ್ರೋಫಿ ಗೆಲವಿಗಾಗಿ ಲಂಕಾದ 20 ಮಿಲಿಯನ್​ ಜನರು ಎದುರು ನೋಡುತ್ತಿದ್ದರು. ಆದರೆ, ಗೆಲವಿನ ಹೊಸ್ತಿಲಲ್ಲ ಎಡವಿದೆವು. ಅಂದು ನನ್ನ ನಗೆ ಬಹಳ ದುಃಖವನ್ನು ಮರೆಮಾಚಿತು. ಅದು ಲಂಕಾ ಜನರ ದುಃಖದ ಪ್ರತಿಬಿಂಬವಾಗಿತ್ತು ಎಂದು ಮನಸಾರೆ ಮಾತನಾಡಿದರು. (ಏಜೆನ್ಸೀಸ್​)

    2011ರ ವಿಶ್ವಕಪ್ ಫೈನಲ್ ಟಾಸ್ ಕೇಳುವಾಗ ಧೋನಿ ಗೊಂದಲಕ್ಕೆ ಕಾರಣವೇನು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts