More

    ಗ್ರಾಪಂ ಕಚೇರಿಗೆ ಸೀಮಿತರಾಗದರಿ: ಗ್ರಾಮ ಸುತ್ತಲು ಪಿಡಿಒಗಳಿಗೆ ಸಚಿವ ಹಾಲಪ್ಪ ಆಚಾರ್ ಸೂಚನೆ

    ಕುಕನೂರು: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗದೆ ಹಳ್ಳಿಗಳ ಸುತ್ತಿ ಸಮಸ್ಯೆ ಅರಿತುಕೊಳ್ಳಬೇಕು ಎಂದು ಸಚಿವ ಹಾಲಪ್ಪ ಆಚಾರ್ ಸೂಚನೆ ನೀಡಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ, ಕುಕನೂರು ತಾಲೂಕಿನ ತಾಪಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಗ್ರಾಮದ ಚರಂಡಿ, ರಸ್ತೆ, ಬೀದಿ ದೀಪಗಳ ಬಗ್ಗೆ ಪರಿಶೀಲನೆ ಮಾಡಬೇಕು. ಸಮಸ್ಯೆ ಬೆಟ್ಟದಂತೆ ಬೆಳೆದಾಗ ಜನರಿಂದ ತಪ್ಪಿಸಿಕೊಂಡು ಓಡಾಡಬೇಕಾಗುತ್ತದೆ. ಆದ್ದರಿಂದ ಗ್ರಾಮದಲ್ಲಿ ಸಣ್ಣ ಸಮಸ್ಯೆ ಇದ್ದರೂ ತಕ್ಷಣ ಪರಿಹರಿಸಬೇಕು ಎಂದರು.

    ಬಹುಗ್ರಾಮ ಕುಡಿವ ನೀರು ಯೋಜನೆಯ ಎಇ ಸತೀಶ್ ಮಾತನಾಡಿ, ಈಗಾಗಲೇ ಕೃಷ್ಣಾ ನದಿಯಿಂದ ಬರುವ ನೀರು 9 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 153 ಗ್ರಾಮಗಳ ಪೈಕಿ 71 ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ ಎಂದರು. ಇದಕ್ಕೆ ಸಚಿವರು, ನೀರು ಬಗ್ಗೆ ಪಿಡಿಒಗಳಿಗೆ ಮೊದಲು ತಿಳಿಸಬೇಕು. ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಇದಕ್ಕೆ ಮೀಟರ್ ಅಳವಡಿಸಲಾಗಿದೆಯೇ ? ಎಲ್‌ಎನ್‌ಟಿ ಕಂಪನಿ ಹೇಗೆ ನಿರ್ವಹಿಸುತ್ತದೆ ಎಂಬುದರ ತರಬೇತಿ ನೀಡುವಂತೆ ಎಂದು ಎಇಗೆ ಸೂಚಿಸಿದರು. ಇನ್ನೂ ಎಷ್ಟು ನೀರು ಬರುತ್ತದೆ ಎನ್ನುವುದರ ಬಗ್ಗೆ ದಾಖಲೆ ಸಂಗ್ರಹಿಸಬೇಕು.

    ತಾಪಂಗೆ ಕಳುಹಿಸಬೇಕು. ಗುಡಿಸಲುಗಳಿಗೂ ನಳ ಅವಡಿಸಬೇಕು. ಪಿಡಿಒಗಳು ಕಾಮಗಾರಿಯ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕು. ಕುಕನೂರು ಪಟ್ಟಣದ ಗುದ್ನೆಪ್ಪನಮಠದ ನವೋದಯ ಶಾಲೆ, ಮುರಾರ್ಜಿ ವಸತಿ ಶಾಲೆಗೆ ಶೀಘ್ರವೇ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ತಾಪಂ ಇಒ ರಾಮಣ್ಣ ದೊಡ್ಮನಿಗೆ ಸಚಿವರು ಸೂಚಿಸಿದರು.

    ವಸತಿ ಯೋಜನೆಯಡಿ ಪಿಡಿಒಗಳು ಹೊಸ ಪಟ್ಟಿ ಸಿದ್ಧಪಡಿಸಬೇಕು. ನಿವೇಶನ ರಹಿತ, ನಿವೇಶನ ಇಲ್ಲದ ಕುಟುಂಬದ ಪಟ್ಟಿ ಸಿದ್ಧ ಪಡಿಸಿ, ಬಿಪಿಎಲ್ ಹೊಂದಿದ್ದ ಕುಟುಂಬಕ್ಕೆ ನಿವೇಶನವಿದ್ದರೆ ಮನೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

    ಯಲಬುರ್ಗಾ ತಹಸೀಲ್ದಾರ್ ಶ್ರೀಶೈಲ ತಳವಾರ, ಕುಕನೂರು ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ಯಲಬುರ್ಗಾ ಇಒ ಸಂತೋಷ ಬಿರಾದಾರ ಪಾಟೀಲ್, ಇಇ ಬಸನಗೌಡ ಪಾಟೀಲ್, ಸಹಾಯಕ ನಿರ್ದೇಶಕರಾದ ವೆಂಕಟೇಶ್ ವಂದಾಲ್, ನಿಂಗನಗೌಡ, ಗೀತಾ ಅಯ್ಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts