More

    ವಾರದ ಏಳೂ ದಿನ ಕೃಷಿ ಉತ್ಪನ್ನ ಖರೀದಿಸಿ: ಕುಕನೂರಿನಲ್ಲಿ ಎಪಿಎಂಸಿ ಅಧಿಕಾರಿಗೆ ರೈತ ಸಂಘ ಮನವಿ

    ಕುಕನೂರು: ಟೆಂಡರ್ ಮೂಲಕ ವಾರದ ಏಳೂ ದಿನ ಕೃಷಿ ಉತ್ಪನ್ನ ಖರೀದಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಎಪಿಎಂಸಿ ಪ್ರಥಮ ದರ್ಜೆ ಸಹಾಯಕ ಶ್ರೀಸಿಂಗ್ ರಜಪೂತ್‌ಗೆ ಗುರುವಾರ ಮನವಿ ಸಲ್ಲಿಸಿದರು.

    ಎಪಿಎಂಸಿ ಆವರಣದ ಮಳಿಗೆಗಳನ್ನು ಬೇರೆ ಉದ್ದೇಶಗಳಿಗೆ ಬಾಡಿಗೆ ನೀಡಿದ್ದು, ಕೂಡಲೇ ತೆರವು ಮಾಡಿಸಬೇಕು. ಅಲ್ಲದೆ ಆವರಣದಲ್ಲಿ ಅಲೆಮಾರಿಗಳು ವಾಸಿಸುತ್ತಿದ್ದು, ಅವರನ್ನು ಬೇರೆಡೆಗೆ ಕಳುಹಿಸಬೇಕು. ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ದೊಡ್ಡ ಗೋದಾಮು, ಉತ್ತಮ ರಸ್ತೆ ಹಾಗೂ ಕುರಿ-ಮೇಕೆ ಸಂತೆ ನಡೆಸಲು ಎಲ್ಲ ರೀತಿಯ ಅನುಕೂಲ ಕಲ್ಪಿಸಿದೆ. ಆದರೆ, ಅಧಿಕೃತ ಪರವಾನಗಿ ಪಡೆದ ವ್ಯಾಪಾರಿಗಳು, ಎಪಿಎಂಸಿಯಲ್ಲಿ ಟೆಂಡರ್ ಮೂಲಕ ವ್ಯಾಪಾರ ವಹಿವಾಟು ನಡೆಸದೆ ಖಾಸಗಿ ಜಾಗದಲ್ಲಿ ವ್ಯವಹರಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎಲ್ಲ ವರ್ತಕರಿಗೆ ವ್ಯವಹಾರ ಮಾಡಲು ನಿವೇಶನ ನೀಡಿದರೂ ಕೆಲವರು ಯಾವುದೇ ವಹಿವಾಟು ನಡೆಸುತ್ತಿಲ್ಲ. ಇದರಿಂದ ಎಪಿಎಂಸಿ ಇದ್ದರೂ ರೈತರ ಪಾಲಿಗೆ ಇಲ್ಲದಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಅಂದಪ್ಪ ಹುರುಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಡ್ಲಿ, ಉಪಾಧ್ಯಕ್ಷ ಮಂಜುನಾಥ ಚಟ್ಟಿ, ರೈತರಾದ ಗವಿಸಿದ್ದಪ್ಪ ಜಿನಿನ್, ಕರಿಗೌಡ ರೋಣದ, ಸಾವಿತ್ರಮ್ಮ ತೆಗ್ಗಿನಮನಿ, ರೇಣುಕಮ್ಮ ಬಿನ್ನಾಳ, ಹನುಮಪ್ಪ ಹಳ್ಳಿಗುಡಿ, ಬಸಪ್ಪ ಮಂಡಲಗಿರಿ, ಶಿವಪ್ಪ, ಭರಮಪ್ಪ ತಳವಾರ ಇತರರಿದ್ದರು.

    ತಾಲೂಕು ಘಟಕ ಉದ್ಘಾಟನೆ: ಪಟ್ಟಣದ ಎಪಿಎಂಸಿ ಮುಖ್ಯದ್ವಾರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನಾಮಫಲಕವನ್ನು ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಶ್ರೀ ಮಹಾದೇವಯ್ಯ ದೇವರು ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts