More

    ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸಲು ಸಚಿವ ಹಾಲಪ್ಪ ಆಚಾರ್‌ಗೆ ಮನವಿ

    ಕುಕನೂರು: ಎನ್‌ಪಿಎಸ್ ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ತಾಲೂಕು ಘಟಕ ಬೈಕ್ ರ‌್ಯಾಲಿ ಮೂಲಕ ಮಸಬಹಂಚಿನಾಳಕ್ಕೆ ತೆರಳಿ ಸಚಿವ ಹಾಲಪ್ಪ ಆಚಾರ್‌ಗೆ ಬುಧವಾರ ಮನವಿ ಸಲ್ಲಿಸಿತು.

    ಸರ್ಕಾರಿ ಸೇವೆಯನ್ನು 35ವರ್ಷ ನಿರ್ವಹಿಸಿ, ನಿವೃತ್ತಿ ಜೀವನವನ್ನು ನೆಮ್ಮದಿ ಹಾಗೂ ಗೌರವಯುತವಾಗಿ ನಡೆಸಲು ಸರ್ಕಾರ ನಿವೃತ್ತಿ ವೇತನ ನೀಡುತ್ತಿತ್ತು. ಆದರೆ 2006 ಮತ್ತು ನಂತರ ನೇಮಕವಾದ ನೌಕರರಿಗೆ ಎನ್‌ಪಿಎಸ್ ಜಾರಿಗೆ ತಂದಿದ್ದು, ಈ ಯೋಜನೆಯು ಸಂಪೂರ್ಣ ಶೇರು ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಅನಿಶ್ಚಿತವಾಗಿದೆ. ಸರ್ಕಾರ ಕನಿಷ್ಟ ಭದ್ರತೆಯನ್ನು ಒದಗಿಸುವಲ್ಲಿ ವಿಫಲವಾಗಿದ್ದು, ನೌಕರರ ನಿವೃತ್ತಿಯ ನಂತರದ ಬದುಕಿಗೆ ಬೆಳಕಾಗದೆ ಕಗ್ಗತ್ತಲಾಗಿದೆ. ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ 10 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೇ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ, ಧರಣಿ ನಡೆಸಲಾಗಿದೆ. ಆದರೂ ಸರ್ಕಾರ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸುತ್ತಿಲ್ಲ. ಎನ್‌ಪಿಎಸ್ ಕರಾಳತೆ ಮನಗಂಡು ಬೇರೆ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿವೆ. ನಮ್ಮ ರಾಜ್ಯದಲ್ಲೂ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಡಿ.19 ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.

    ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ ತಳವಾರ, ಜೆಸ್ಕಾಂ ವಿಭಾಗದ ಅಧ್ಯಕ್ಷ ಬಸವರಾಜ ಬಾರಿಗಿಡದ, ಕಂದಾಯ ನೌಕರರ ಸಂಘದ ಅಧ್ಯಕ್ಷ ಸುರೇಶ ಕ್ಯಾದಗುಂಪಿ, ನೌಕರರಾದ ಅಶೋಕ ಮಾದಿನೂರ, ಶಿವಕುಮಾರ ಮೇಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts