ಗ್ರಾಮ ಸ್ವಚ್ಛತೆಗೆ ಸಹಕಾರ ಅಗತ್ಯ: ಭಾನಾಪುರ ಗ್ರಾಪಂ ಪಿಡಿಒ ವೈಜನಾಥ ಸಾರಂಗಮಠ ಅನಿಸಿಕೆ

blank

ಕುಕನೂರು: ಗ್ರಾಮದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಭಾನಾಪುರ ಗ್ರಾಪಂ ಪಿಡಿಒ ವೈಜನಾಥ ಸಾರಂಗಮಠ ಹೇಳಿದರು.

ಗ್ರಾಪಂ ಕಚೇರಿ ಆವರಣದಲ್ಲಿ ದೂರದೃಷ್ಟಿ ಯೋಜನೆಯಡಿ ಗ್ರಾಮದ ನಕ್ಷೆ ಕಾರ್ಯಕ್ರಮ ಕುರಿತು ಬುಧವಾರ ಮಾತನಾಡಿದರು. ಭಾನಾಪುರ ಗ್ರಾಪಂ ದೂರದೃಷ್ಟಿ ಯೋಜನೆಗೆ ಆಯ್ಕೆಗೊಂಡಿದ್ದು, ಅದರ ಮಹತ್ವ ತಿಳಿದುಕೊಳ್ಳಬೇಕು. ಗ್ರಾಮದ ಚರಂಡಿ ನೀರು ನಿರ್ವಹಣೆ, ಇಂಗು ಗುಂಡಿ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಅವಕಾಶವಿದೆ. ಅಲ್ಲದೆ ಈಗಾಗಲೇ ನಿರ್ಮಾಣಗೊಂಡಿರುವ ಶೌಚಗೃಹ ಸಾರ್ವಜನಿಕರು ಸರಿಯಾಗಿ ಬಳಕೆ, ನಿರ್ವಹಣೆ ಮಾಡಬೇಕು. ಪ್ರಮುಖವಾಗಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಸಿ, ಒಣ ಕಸವನ್ನು ವಿಂಗಡಣೆ ಮಾಡಿ ಹಾಕಬೇಕು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ, ಉಪಾಧ್ಯಕ್ಷೆ ಮಹಾದೇವಿ ಸಸಿ, ಸದಸ್ಯರಾದ ದೇವೇಂದ್ರ ಕಮ್ಮಾರ, ಸಿದ್ದಲಿಂಗಪ್ಪ ಗುರಿಕಾರ, ನೀಲಕಂಠಯ್ಯ ಸಸಿಮಠ, ರೇಣುಕಾದೇವಿ ತಳವಾರ, ರಾಮಣ್ಣ ಕೋಮಲಾಪುರ, ಕಾರ್ಯದರ್ಶಿ ಫಕೀರರೆಡ್ಡಿ ಬಾವಿಕಟ್ಟಿ, ಸಿಬ್ಬಂದಿ ಅಲ್ಲಾಭಕ್ಷಿ ನದಾಫ್, ಮುರ್ತುಜಾ ದಫೇದಾರ, ಶರಣಪ್ಪ ಬನ್ನಿಕೊಪ್ಪ, ಗ್ರಂಥಪಾಲಕ ಹೇಮರಾಜ ಗಡಾದ, ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ ಬಳಿಗೇರಿಮಠ, ಅನ್ನಪೂರ್ಣ ಕ್ಯಾದಗುಂಪಿ, ಎನ್‌ಆರ್‌ಎಲ್‌ಎಂನ ವಿಶಾಲಾಕ್ಷಿ ಇತರರಿದ್ದರು.

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…