More

    ಕೂಡಲೇ ಹೆಸರು ಕಾಳು ಖರೀದಿ ಮಾಡಿ: ಕುಕನೂರಿನಲ್ಲಿ ರೈತ ಸಂಘ-ಹಸಿರು ಸೇನೆ ಪ್ರತಿಭಟನೆ

    ಕುಕನೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಶುಕ್ರವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿತು.

    ಹೆಸರು ಬೆಳೆ ಕಟಾವು ಮಾಡಿ ಮೂರು ತಿಂಗಳಾಗಿದೆ. ಸರ್ಕಾರ ಖರೀದಿ ಕೇಂದ್ರ ತೆರೆದಿದೆ. ಆದರೆ, ಹೆಸರು ನೋಂದಾಯಿಸಿಕೊಂಡು ಒಂದು ತಿಂಗಳಾದರೂ ರೈತರಿಂದ ಖರೀದಿ ಮಾಡುತ್ತಿಲ್ಲ. ಸುಮಾರು 900 ಕ್ಕೂ ಅಧಿಕ ರೈತರು ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಕೆಲವರಿಂದ ಹೆಸರು ಖರೀದಿಸಿದ್ದಾರೆ. ಆದರೆ, ಅಧಿಕಾರಿಗಳು ತೇವಾಂಶ ನೆಪ ಹೇಳುತ್ತಿದ್ದಾರೆ. ರೈತರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಯಾವುದೇ ಕಾಳಜಿ ಇಲ್ಲ. ಕೇವಲ ರೈತರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದು ಈ ವರ್ಷದ ಪರಿಸ್ಥಿತಿ ಅಲ್ಲ. ಪ್ರತಿ ಸಲ ಇದೇ ಆಗಿದ್ದು, ಪ್ರತಿಭಟನೆ, ಹೋರಾಟ ಮಾಡುವ ಮೂಲಕ ಬೆಂಬಲ ಬೆಲೆಗೆ ಬೆಳೆ ನೀಡಬೇಕಾಗಿದೆ. ಕೂಡಲೇ ಹೆಸರು ಖರೀದಿಸಬೇಕು ಎಂದು ಒತ್ತಾಯಿಸಿದರು. ಸಂಘದ ತಾಲೂಕು ಅಧ್ಯಕ್ಷ ಅಂದಪ್ಪ ಹುರಳಿ, ರೈತ ಮುಖಂಡರಾದ ಶರಣಪ್ಪ ಹಾದಿಮನಿ, ಈರಪ್ಪ ದಳವಾಯಿ, ಶರಣಪ್ಪ ಆದಾಪುರ, ದೇವಪ್ಪ, ಪತ್ರೇಪ್ಪ ವೀರಾಪುರ, ಗವಿಸಿದ್ದಪ್ಪ ಬಂಡಿಹಾಳ, ಯಂಕಣ್ಣ ನಡವಲಮನಿ, ಅಸ್ಪಾಕ್ ಅಲಿ ನದಾಫ್, ರಾಮಪ್ಪ ಹಳ್ಳಿಕೇರಿ, ಅಂದಪ್ಪ ಹೊಸಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts