More

    ಸಮಾನತೆಗಾಗಿ ಶ್ರಮಿಸಿದ ಡೋಹರ ಕಕ್ಕಯ್ಯ -ಗುರುಮಾತೆ ನಂದಾ ತಾಯಿ ಬಣ್ಣನೆ

    ಕುಕನೂರು: ಶಿವಶರಣ ಡೋಹರ ಕಕ್ಕಯ್ಯ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ಡೋಹರ ಸಮಾಜದ ಗುರುಮಾತೆ ನಂದಾ ತಾಯಿ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದ ಬಳಿ ಶಿವಶರಣ ಡೋಹರ ಕಕ್ಕಯ್ಯ ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಸಮಾಜಕ್ಕೆ ಅಂಟಿದ ಮೌಢ್ಯ ಹೋಗಲಾಡಿಸಿ, ಸಮಾನತೆ ನೆಲೆಸಲು ಶರಣರು ಕಟ್ಟಿದ ಅನುಭವ ಮಂಟಪದಲ್ಲಿ ತಮ್ಮ ಸಾಹಿತ್ಯದ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ. ಜನರಲ್ಲಿನ ಅಸಮಾನತೆ ತೊಲಗಿಸಲು ಹಗಲಿರುಳು ಶ್ರಮಿಸಿದರು. ಅವರ ಸಾಹಿತ್ಯ ಗ್ರಂಥಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

    ಹಿರಿಯ ಸಾಹಿತಿ ಆರ್.ಪಿ.ರಾಜೂರು, ಜಿಪಂ ಮಾಜಿ ಸದಸ್ಯ ರಾಮಣ್ಣ ಭಜಂತ್ರಿ ಮಾತನಾಡಿದರು. ಸಮಾಜದ ಅಧ್ಯಕ್ಷ ಲೋಕಪ್ಪ ನಾರಾಯಣಕರ, ಮುಖಂಡರಾದ ಬಸವರಾಜ ಕರಾಠೆ, ರಮೇಶ ಗಜಾಕೋಶ, ವೀರೇಶ ಪೂಜಾರ, ಗಂಗಾಧರ ಕರಾಠೆ, ಸೋಮಶೇಖರ ಗಜಾಕೋಶ, ಮಹಾದೇವ ಕರಾಠೆ, ಶೋಭಾ ಗಜಾಕೋಶ, ಸೀತಾ ಪೂಜಾರ, ಚಂದ್ರು ಗುಡಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts