More

    ಮಾದರಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ

    ಶಾಸಕ ಹಾಲಪ್ಪ ಆಚಾರ್ ಭರವಸೆ | ಕಾಮಗಾರಿಗೆ ಭೂಮಿ ಪೂಜೆ

    ಕುಕನೂರು: ಸಂಘದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಮೂರು ಲಕ್ಷ ರೂ. ಅನುದಾನ ನೀಡಿದ್ದು, ಮಾದರಿ ಕಟ್ಟಡ ನಿರ್ಮಾಣಕ್ಕಾಗಿ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇನೆ. ಹಾಗೆಯೇ ರಾಬಕೊ ಹಾಲು ಒಕ್ಕೂಟ ಕೂಡ ಅನುದಾನ ನೀಡಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ತಾಲೂಕಿನ ದ್ಯಾಂಪೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು. ಸ್ವಾವಲಂಬಿ ಬದುಕಿಗೆ ಆಸರೆ ಆಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ದ್ಯಾಂಪೂರು ಗ್ರಾಮಸ್ಥರ ಒಗ್ಗಟ್ಟಿನಿಂದ ಹಾಲು ಉತ್ಪಾದಕರ ಸಂಘದ ಕಟ್ಟಡ ಕಾಮಗಾರಿ ಆರಂಭವಾಗಿದೆ. ಜಿಲ್ಲೆಯಲ್ಲಿ ಮಾದರಿ ಸಂಘ ಎಂದು ಗುರುತಿಸಿಕೊಂಡಿರುವ ಈ ಸಂಘ, ತನ್ನ ಆಡಳಿತ ಮಂಡಳಿ ಕಾರ್ಯ ವೈಖರಿಯಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವತ್ತ ದಾಪುಗಾಲು ಇಡುತ್ತಿದೆ ಎಂದು ಶ್ಲಾಘಿಸಿದರು.

    ರಾಬಕೊ ಹಾಲು ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ, ನಿರ್ದೇಶಕರಾದ ಎಂ.ಸತ್ಯನಾರಾಯಣ, ಕವಿತಾ ಗುಳಗಣ್ಣವರ್, ಒಕ್ಕೂಟದ ಉಪ ವ್ಯವಸ್ಥಾಪಕ ಜಿ.ಐ.ಪಡಸಲಗಿ, ಕ್ಷೇತ್ರ ಸಹಾಯಕ ಬಸವರಾಜ, ಸಂಘದ ಅಧ್ಯಕ್ಷ ಬಸವರಾಜಸ್ವಾಮಿ ಕಂದಗಲ್ಲಮಠ, ಉಪಾಧ್ಯಕ್ಷ ಈರಪ್ಪ ಸದರಿ, ನಿರ್ದೇಶಕರಾದ ರಾಮಣ್ಣ ತಳವಾರ, ಶರಣಯ್ಯ ಸಸಿಮಠ, ಅನ್ನಮ್ಮ ಬೀಡಿನಾಳ, ಭೀಮವ್ವ ತೊಂಡಿಹಾಳ, ಗ್ರಾಪಂ ಅಧ್ಯಕ್ಷ ಅನಸೂಯಾ ಮೇಟಿ, ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts