More

    ಸಾಮರಸ್ಯ, ಸಹಬಾಳ್ವೆ ಮತ್ತು ವಾಟ್ಸಪ್​ ಸಂದೇಶ … ಇದು ‘ಕುದ್ರು’

    ಬೆಂಗಳೂರು: ಒಂದು ಸಣ್ಣ ದ್ವೀಪದಲ್ಲಿ ಬೇರೆಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿರುತ್ತಾರೆ. ಒಂದು ವಾಟ್ಸಾಪ್ ಸಂದೇಶ ಅವರ ಮಧ್ಯೆ ಅಶಾಂತಿ ಹುಟ್ಟಿಸುತ್ತದೆ. ಬಂದಿರುವ ತೊಂದರೆಯನ್ನು ನಿವಾರಣೆ ಮಾಡುವುದರ ಜತೆಗೆ ಮತ್ತೆ ಸಾಮರಸ್ಯದಿಂದ ಹೇಗೆ ಜೀವನ ನಡೆಸಬಹುದು? ಎಂಬ ಕಥೆಯನ್ನು ಹೊತ್ತು ತರುತ್ತಿದೆ ‘ಕುದ್ರು’ ಎಂಬ ಹೊಸ ಚಿತ್ರ.

    ಇದನ್ನೂ ಓದಿ: ಸಚಿವ ಸುಧಾಕರ್ ಬಿಡುಗಡೆ ಮಾಡಿದರು ‘ತನುಜಾ’ ಚಿತ್ರದ ಟ್ರೈಲರ್​ …

    ಕನ್ನಡದಲ್ಲಿ ಕರಾವಳಿಯ ಹಿನ್ನೆಲೆಯ ಚಿತ್ರಗಳು ಈಗೀಗ ಹೆಚ್ಚೆಚ್ಚು ಬರುತ್ತಿವೆ. ಅಂಥ ಚಿತ್ರಗಳ ಸಾಲಿಗೆ ಈಗ ‘ಕುದ್ರು’ ಸಹ ಸೇರುತ್ತದೆ. ಈ ಚಿತ್ರಕ್ಕೆ ಇತ್ತೀಚೆಗೆ ಅಭಿಮಾನ್​ ಸ್ಟುಡಿಯೋದಲ್ಲಿ ಒಂದು ಹಾಡು ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರದ ಮೂವರು ನಾಯಕರೊಂದಿಗೆ, ದೆಹಲಿ ಮೂಲದ ನಟಿ ನಮ್ರತಾ ಮಲ್ಲ ಹೆಜ್ಜೆ ಹಾಕಿದ್ದರೆ. ಈ ಸಂದರ್ಭದಲ್ಲಿ ಚಿತ್ರಸಾಮರಸ್ಯ, ಸಹಬಾಳ್ವೆ ಮತ್ತು ವಾಟ್ಸಪ್​ ಸಂದೇಶ … ಇದು 'ಕುದ್ರು'ತಂಡದವರು ಚಿತ್ರದ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಈ ಚಿತ್ರವನ್ನು ಮಶು ವೈ.ಜಿ. ಹಳ್ಳಿ ನಿರ್ದೇಶನದ ಮಾಡುತ್ತಿದ್ದಾರೆ. ‘ಕುದ್ರು’ ಕುರಿತು ಮಾತನಾಡುವ ಅವರು, ‘ಒಂದು ಸಣ್ಣ ದ್ವೀಪದಲ್ಲಿ ಬೇರೆಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿದಾಗ, ಒಂದು ವಾಟ್ಸಾಪ್ ಸಂದೇಶ ಹೇಗೆ ಅಶಾಂತಿಯನ್ನು ತಂದು ಹಾಕುತ್ತದೆ ಹಾಗೂ ಬಂದ ತೊಂದರೆಯನ್ನು ನಿವಾರಣೆ ಮಾಡಿಕೊಂಡು‌ ಮತ್ತೆ ಸಾಮರಸ್ಯದಿಂದ ಹೇಗೆ ಜೀವನ ನಡೆಸಬಹುದು ಎಂಬುದನ್ನು I ಚಿತ್ರದಲ್ಲಿ ತೋರಿಸುತ್ತಿದ್ದೇವೆ. SE. 70ರಷ್ಟು ಭಾಗದ ಚಿತ್ರೀಕರಣ ಮಳೆಯಲ್ಲೇ ನಡೆದಿರುವುದು ವಿಶೇಷ. ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರವೂ ಮುಗಿದಂತಾಗುತ್ತದೆ’ ಎನ್ನುತ್ತಾರೆ.ಮಧು.

    ಇದನ್ನೂ ಓದಿ: ಒಂದೇ ದಿನ ಬಿಡುಗಡೆಯಾಗಲಿದೆ ‘ಯಶೋದ’ ಮತ್ತು ‘ಕಾಂತಾರ’ … ಒಂದು ಅಮೇಜಾನ್​ನಲ್ಲಿ, ಇನ್ನೊಂದು ನೆಟ್​ಫ್ಲಿಕ್ಸ್​ನಲ್ಲಿ

    ಹರ್ಷಿತ್ ಶೆಟ್ಟಿ, ಗಾಡ್ವಿನ್ ಹಾಗೂ ಫರ್ಹಾನ್ ಚಿತ್ರದ ನಾಯಕರಾಗಿ ನಟಿಸಿದ್ದು, ಪ್ರಿಯಾ ಹೆಗ್ಡೆ, ವಿನುತ ಹಾಗೂ ಡೈನ ಡಿಸೋಜ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ಮಾಣ ಮಾಡಿದ್ದಾರೆ ಭಾಸ್ಕರ್​ ನಾಯಕ್​. ಪ್ರತೀಕ್ ಕುಂಡು ಸಂಗೀತ ನಿರ್ದೇಶನ ಹಾಗೂ ದೀಪು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಉಡುಪಿ, ಬೆಂಗಳೂರು, ಗೋವಾ ಹಾಗೂ ಸೌದಿ ಅರೇಬಿಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ.

    ಹರಿಪ್ರಿಯಾ-ವಸಿಷ್ಠ ಪ್ರೀತಿಗೆ ಕನ್ನಡಿ ಹಿಡಿದಿದ್ದು ಕ್ರಿಸ್ಟಲ್​ ಅಂತೆ … ಯಾರು ಈ ಕ್ರಿಸ್ಟಲ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts