More

    ನಾರಾಯಣಗುರು ಕೋಶ ಸ್ಥಾಪನೆಯನ್ನು ಸ್ವಾಗತಿಸಿದ ಕುದ್ರೋಳಿ ಕ್ಷೇತ್ರದ ಎಚ್.ಎಸ್.ಸಾಯಿರಾಂ

    ಮಂಗಳೂರು: ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರೀ ನಾರಾಯಣಗುರು ಕೋಶ ಸ್ಥಾಪಿಸಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ನಿರ್ಧಾರ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ ತಿಳಿಸಿದ್ದಾರೆ.

    ಬಿಲ್ಲವರ ಏಳಿಗೆಗಾಗಿ ಕೋಶ ಸ್ಥಾಪಿಸಲು ಆದೇಶ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ.ವೈ.ಭರತ್ ಶೆಟ್ಟಿ ಕಾರಣರಾಗಿದ್ದು, ಅವರಿಗೆ ಕೃತಜ್ಞತೆಗಳು. ಯುವವಾಹಿನಿಗೆ ರಾಜ್ಯಮಟ್ಟದ ಸ್ವಾತಂತ್ರೃ ಅಮೃತೋತ್ಸವ ಪ್ರಶಸ್ತಿ, ಕುದ್ರೋಳಿ ಯುವಕ ಸಂಘಕ್ಕೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸ್ವಾಗತಾರ್ಹ ಎಂದರು.

    ಕ್ಷೇತ್ರದ ಹೆಸರು ದುರ್ಬಳಕೆ ಸಲ್ಲದು:

    ಕುದ್ರೋಳಿ ಕ್ಷೇತ್ರ ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾಪಿಸಿದ ಕ್ಷೇತ್ರವಾಗಿದ್ದು, ಅವರ ತತ್ವಾದರ್ಶಗಳ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಕ್ಷೇತ್ರದ ಹೆಸರನ್ನು ಆಡಳಿತ ಮಂಡಳಿಯ ಅನುಮತಿಯಿಲ್ಲದೆ ವ್ಯಕ್ತಿ, ಪಕ್ಷ, ಸಂಘಟನೆಗಳು ಬಳಸಿಕೊಳ್ಳುವುದು ಸಮಂಜಸವಲ್ಲ. ಇದಕ್ಕೆ ಕ್ಷೇತ್ರಾಡಳಿತ ಮಂಡಳಿಯ ಸ್ಪಷ್ಟ ವಿರೋಧವಿದೆ. ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ, ಶುಭ ಸಮಾರಂಭ ಹೊರತುಪಡಿಸಿ ಇನ್ನಿತರ ಯಾವುದೇ ಸಂಘಟನೆ, ಸಭೆ, ಪತ್ರಿಕಾಗೋಷ್ಠಿಗಳಿಗೆ ಕ್ಷೇತ್ರದ ಸಭಾಂಗಣ ಬಳಕೆಗೆ ಅವಕಾಶವಿಲ್ಲ. ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸುವ ಮುನ್ನ ಕ್ಷೇತ್ರದ ಆಡಳಿತ ಮಂಡಳಿ ಅನುಮತಿ ಕಡ್ಡಾಯ. ಇದರ ಹೊರತಾಗಿ ಕಾರ್ಯಕ್ರಮ ನಿಗದಿಪಡಿಸಿದರೆ ಅದಕ್ಕೆ ಆಡಳಿತ ಅನುಮತಿ ಇರುವುದಿಲ್ಲ ಮತ್ತು ಕ್ಷೇತ್ರಾಡಳಿತ ಮಂಡಳಿ ಜವಾಬ್ದಾರಿಯಲ್ಲ ಎಂದು ಸಾಯಿರಾಂ ತಿಳಿಸಿದ್ದಾಗಿ ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts