More

    ತಪ್ಪು ಮನೋಭಾವದಿಂದ ಪಾಲಕರು ಹೊರಬರಲಿ, ಕೂಡ್ಲಿಗಿ ತಹಸೀಲ್ದಾರ್ ಟಿ.ಜಗದೀಶ್ ಸಲಹೆ

    ಕೂಡ್ಲಿಗಿ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಹೋದರೆ ಮರ್ಯಾದೆ ಹರಾಜಾಗುತ್ತದೆ ಎಂಬ ತಪ್ಪು ಮನೋಭಾವದಿಂದ ಪಾಲಕರು ಹೊರಬರಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.

    ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನುಗಳ ಸೇವೆ ಸಮಿತಿ, ತಾಪಂ, ಸಿಡಿಪಿಒ ಹಾಗೂ ಬಿಇಒ ಕಚೇರಿ ಹಮ್ಮಿಕೊಂಡ ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತಾನಾಡಿದರು.

    ಮಕ್ಕಳ ಮೇಲಿನ ದೌರ್ಜನ್ಯ ಕಾನೂನಿಗೆ ವಿರುದ್ಧವಾದುದು. ಹಾಗಿದ್ದರೂ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಮಕ್ಕಳಲ್ಲಿನ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಂಡು ಅವರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹದಿಹರೆಯದ ವಯಸ್ಸು ತುಂಬಾ ಅಪಾಯಕಾರಿ. ಈ ವಯಸ್ಸಿನವರು ಆತ್ಮೀಯವಾಗಿ ಮಾತನಾಡುವರನ್ನು ಹೆಚ್ಚಾಗಿ ನಂಬುತ್ತಾರೆ. ಮೈಮರೆತಾಗ ದುರಂತ ಸಂಭವಿಸುತ್ತದೆ. ಇದರಿಂದ ಮಕ್ಕಳಿಗೆ ಸಾಮಾಜಿಕವಾಗಿ ತೊಂದರೆಯಾಗುತ್ತದೆ. ಹಾಗಾಗಿ, ಹೆಣ್ಣುಮಕ್ಕಳು ತಮ್ಮ ಯೋಚನೆಗಳನ್ನು ಒಳ್ಳೆಯದರ ಕಡೆಗೆ ಹರಿಸಬೇಕು ಎಂದು ಕಿವಿಮಾತು ಹೇಳಿದರು.

    ವಕೀಲ ಸಿ.ವಿರೂಪಾಕ್ಷಪ್ಪ ಮಾತಾನಾಡಿ, 18 ವಷರ್ದೊಳಗಿರುವ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿರುವವರನ್ನು ಶಿಕ್ಷಿಸುವುದಕ್ಕಾಗಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದೆ. ಶೇ. 52 ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಮಕ್ಕಳ ಮೇಲೆ ದೈಹಿಕವಾಗಿ, ಮಾನಸಿಕವಾಗಿ ದೌರ್ಜನ್ಯಗಳು ನಡೆಯುತ್ತವೆ. ತಂದೆ, ತಾಯಿ ಮಕ್ಕಳ ಮೇಲೆ ಹೆಚ್ಚು ನಿಗಾವಹಿಸಬೇಕು. ಮಕ್ಕಳೊಂದಿಗೆ ಲೈಂಗಿಕ ಸಂಪರ್ಕದಂತಹ ದೌರ್ಜನ್ಯಗಳಿಗೆ ಕನಿಷ್ಠ 14 ವಷರ್ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts