More

    ಊರಮ್ಮ ದೇವಿ ಗುಡಿ ನಿರ್ಮಾಣ ಆರಂಭ

    ಕೂಡ್ಲಿಗಿ: ಬಹು ದಿನದ ನಿರೀಕ್ಷೆಯಂತೆ ಗ್ರಾಮ ದೇವತೆ ಊರಮ್ಮ ದೇವಿಯ ನೂತನ ಗುಡಿ ನಿರ್ಮಾಣಕ್ಕೆ ಸೋಮವಾರ ದೈವಸ್ಥರು ಹಾಗೂ ಊರಿನ ಮುಖಂಡರು ಅಧಿಕೃತವಾಗಿ ಚಾಲನೆ ನೀಡಿದರು.

    ತಮಿಳುನಾಡು ಮೂಲದ ಶಿಲ್ಪಿ ಕಾಳಿಮುತ್ತುಗೆ ಊರಿನ ಆಯಾಗಾರರ ಮುಖಾಂತರ ಮುಂಗಡ ಹಣ ನೀಡಿದರು. ಈ ಸಂಧರ್ಭ ಪಟ್ಟಣದ ಆಯಾಗಾರರ ಪ್ರಮುಖರಾದ ಕೆ.ಎಚ್.ವೀರನಗೌಡ ಮಾತಾನಾಡಿ, ಊರಮ್ಮ ದೇವಿಯ ನೂತನ ಗುಡಿ ನಿರ್ಮಾಣಕ್ಕೆ ಈಗಾಗಲೇ ಸಕಲ ಸಿದ್ದತೆಯನ್ನು ಕೈಗೊಂಡು ಮುಖಂಡರೊಂದಿಗೆ ಚರ್ಚಿಸಿ ಅಂತಿಮವಾಗಿ ತಮಿಳುನಾಡು ಮೂಲದ ಶಿಲ್ಪಿ ಕಾಳಿಮುತ್ತುಗೆ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಅಂದಾಜು ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನ ಹಾಗೂ ಗೋಪುರ ನಿರ್ಮಾಣ ಕೈಗೊಳ್ಳಲಾಗುವುದು. ಭಕ್ತರು ಈಗಾಗಲೇ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿದ್ದಾರೆ. ಸಂಪೂರ್ಣವಾಗಿ ಕಲ್ಲಿನಿಂದ ದೇವಸ್ಥಾನ ನಿರ್ಮಾಣ ಮಾಡಲು ದೈವದವರು, ಭಕ್ತರು ಉದ್ದೇಶಿಸಿದ್ದಾರೆ. ಅತ್ಯಂತ ವೈಭವವಾಗಿ ನೂತನ ದೇವಸ್ಥಾನ ನಿರ್ಮಾಣವಾಗಲಿದೆ ಎಂದರು.

    ಪ್ರಮುಖರಾದ ಬಂಗಾರು ಹನುಮಂತು, ಸಿ.ಬಿ.ಜಯರಾಂ ನಾಯಕ, ಸಿರಬಿ.ಮಂಜುನಾಥ, ಎಸ್.ಸುರೇಶ್,ಬಾಣದ ಶಂಕರ,ಹೊನ್ನೇಶ್,ದುರುಗಪ್ಪ, ಶ್ರೀಕಾಂತ, ಕಡ್ಡಿ ಮಂಜುನಾಥ, ಗ್ಯಾಸ್ ವೆಂಕಟೇಶ, ಶಾಂತಪ್ಪ,ಗುಜ್ಜಲ ಗಣೇಶ್, ರಾಮಾಂಜನಿ, ಅರ್ಚಕರಾದ ಬಿ.ನಾಗರಾಜ್, ವೀರಣ್ಣ, ಇಂಜಿನಿಯರ್ ಮಲ್ಲಿಕಾರ್ಜುನ ಗೌಡ, ತಳವಾರ ಸುರೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts