More

    ಕೂಡ್ಲಿಗಿ ಪಪಂಗೆ ನಡೆದಿದ್ದ ಉಪ ಚುನಾವಣೆಯಲ್ಲಿ ವಿಜಯದ ನಗೆ ಬೀರಿದ ಕಾಂಗ್ರೆಸ್, ಜೆಡಿಎಸ್

    ಕೂಡ್ಲಿಗಿ: ಸ್ಥಳೀಯ ಪಪಂಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿಜಯದ ನಗೆ ಬೀರಿವೆ.

    ಪಟ್ಟಣದ ಸಪಪೂ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ 8ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ, ಮೊದಲಿಗೆ 1ನೇ ವಾರ್ಡ್‌ನ ಮತ ಎಣಿಕೆ ಪ್ರಾರಂಭವಾಗಿ ಕಾಂಗ್ರೆಸ್ ಅಭ್ಯರ್ಥಿ ಲೀಲಾವತಿ ಪ್ರಭಾಕರ 237 ಮತಗಳನ್ನು ಪಡೆಯುವ ಮೂಲಕ ಗೆಲವು ಸಾಧಿಸಿದರು. ಈ ಹಿಂದೆ ಇದೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಂ. ತ್ರೀಮೂರ್ತಿ ಜಯ ಸಾಧಿಸಿದ್ದರು.

    12ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಸರಸ್ವತಿ ರಾಘವೇಂದ್ರ 457 ಮತಗಳನ್ನು ಪಡೆದು ಭಾರಿ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಹಿಂದೆ 12ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಕೆ. ಜಯಮ್ಮ ಜಯ ಸಾಧಿಸಿದ್ದರು. ಸ್ಥಳೀಯ ಪಪಂನ ಒಟ್ಟು 20 ಸ್ಥಾನಗಳಲ್ಲಿ ಈಗ ಬಿಜೆಪಿ 6, ಕಾಂಗ್ರೆಸ್ 7, ಜೆಡಿಎಸ್ 5, ಪಕ್ಷೇತರರು 2 ಸಂಖ್ಯಾಬಲ ಹೊಂದಿವೆ. ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್.ಟಿ. ಮಹಿಳೆಗೆ ಮೀಸಲಾದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಬಿಜೆಪಿಯ ಎಂ. ಶಾರದಾಬಾಯಿ ಹಾಗೂ ಉಪಾಧ್ಯಕ್ಷೆ ಊರಮ್ಮ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.

    ಸಂಭ್ರಮಾಚರಣೆ: ಫಲಿತಾಂಶ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ನಿರ್ಬಂಧ ಇರುವುದರಿಂದ ಪೋಲೀಸರು ಗುಂಪನ್ನು ಚದುರಿಸಿದರು. ಹೀಗಾಗಿ ಗೆದ್ದ ಅಭ್ಯರ್ಥಿಗಳು ತಮ್ಮ ವಾರ್ಡ್‌ನ ಮತದಾರರ ಮನೆಗೆ ತೆರಳಿ ಸಂತಸ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts