More

    ಓದು ಅತ್ಯುತ್ತಮ ವ್ಯಕ್ತಿತ್ವ ರೂಪಿಸುತ್ತದೆ, ಹೆಡ್‌ಕಾನ್ಸ್‌ಟೇಬಲ್ ಸ್ವರೂಪ್ ಕೊಟ್ಟೂರು ಅಭಿಮತ

    ಕೂಡ್ಲಿಗಿ: ಓದು, ಜ್ಞಾನಾರ್ಜನೆಗೆ ಮತ್ತು ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲಿಕ್ಕೆ ಸಹಕಾರಿ ಎಂದು ಲೇಖಕ, ಹೆಡ್‌ಕಾನ್ಸ್‌ಟೇಬಲ್ ಸ್ವರೂಪ್ ಕೊಟ್ಟೂರು ಹೇಳಿದರು. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಮಾತನಾಡಿದರು. ಓದುವ ಗೀಳು ಮನುಷ್ಯನನ್ನು ಮಾಗಿಸುತ್ತದೆ. ಎಲ್ಲ ವಯೋಮಾನದವರು ಕಡ್ಡಾಯವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದು ಮತ್ತು ಅನುಭವ ನಮ್ಮನ್ನು ಪ್ರಬುದ್ಧಗೊಳಿಸಿ, ವಿಚಾರವಂತ, ವಿನಯವಂತರಾಗಿಸುತ್ತದೆ ಎಂದರು.

    ಅಂತಿಮವಾಗಿ ಪುಸ್ತಕಗಳೇ ನಮ್ಮ ಅತ್ಯುತ್ತಮ ಸ್ನೇಹಿತ. ಈ ಜಗತ್ತಿನಲ್ಲಿ ಓದುವ ಅಭಿರುಚಿ, ಹಂಬಲ ಹೊಂದಿರುವ ವ್ಯಕ್ತಿಯೇ ನೈಜವಾಗಿ ಸುಖೀ ಜೀವಿ. ನಮ್ಮ ತಿಳಿವಳಿಕೆ, ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಲು ಪುಸ್ತಕ ಮತ್ತು ಓದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದ ಅವರು, ನಾವು ಸಾಧ್ಯವಾದಷ್ಟು ಪ್ರತಿಯೊಬ್ಬರಿಗೆ ಓದಿನ ಪ್ರಯೋಜನಗಳು, ಸಾರ್ವಜನಿಕ ಗ್ರಂಥಾಲಯಗಳ ಮಹತ್ವ, ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಆ ಮೂಲಕ ಪ್ರತಿಯೊಬ್ಬರೂ ಸಾರ್ವಜನಿಕ ಗ್ರಂಥಾಲಯದ ಸದಸ್ಯತ್ವ ಹೊಂದಿ, ಓದುವುದನ್ನು ತಮ್ಮ ಜೀವನದ ಒಂದು ಭಾಗವೆಂದು ಅರಿಯುವಂತೆ ಮಾಡಿದಾಗ ಮಾತ್ರ ರಾಷ್ಟ್ರೋಯ ಗ್ರಂಥಾಲಯ ಸಪ್ತಾಹದ ನೈಜ ಉದ್ದೇಶ ಈಡೇರುತ್ತದೆ ಎಂದರು.

    ಪರ್ತಕರ್ತ ಕೆ.ಎಂ ವೀರೇಶ್ ಮಾತನಾಡಿ, ಗ್ರಂಥಾಲಯಗಳು ಡಿಜಟಲೀಕರಣ ಆಗುತ್ತಿದ್ದು, ಓದುಗರಿಗೆ ಸಾಕಷ್ಟು ಅನುಕೂಲಗಳಾಗಿವೆ. ಜ್ಞಾನ ದಾಹ ತಣಿಸಿಕೊಳ್ಳಲು ಸಾರ್ವಜನಿಕ ಗ್ರಂಥಾಲಯಗಳಿಂದ ಮಾತ್ರ ಸಾಧ್ಯ ಎಂದರು. ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಎಂ ವೀರಯ್ಯ, ಗ್ರಂಥಪಾಲಕ ಸುರೇಶ್ ಮತ್ತು ಸಹಾಯಕ ಪ್ರಶಾಂತ್ ಅವರನ್ನು ಓದುಗರು ಸನ್ಮಾನಿಸಿದರು.

    ಪ್ರಮುಖರಾದ ಯಶವಂತ, ಸುನೀಲ್, ಎಂ.ಎಂ ಸದ್ಧರ್ಮ, ನಾಗರಾಜ ಕೊಟ್ರಪ್ಪನವರ್, ಬಿಆರ್‌ಪಿ ನಾಗರಾಜ್, ಪತ್ರಕರ್ತರಾದ ಎಲೆ ನಾಗರಾಜ, ಕೆ. ನಾಗರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts