More

    ಕೂಡ್ಲಿಗಿಯಲ್ಲಿ ಮುಸ್ಲಿಂ ಕುಟುಂಬದಿಂದ ನಾಗರ ಪಂಚಮಿ ಆಚರಣೆ; ಹುತ್ತಕ್ಕೆ ಹಾಲೆರೆದು ಪ್ರಾರ್ಥನೆ

    ಕೂಡ್ಲಿಗಿ: ಪಟ್ಟಣದ ಮುಸ್ಲಿಂ ಕುಟುಂಬವೊಂದು ಹಿಂದು ಸಂಪ್ರದಾಯದಂತೆ ಶುಕ್ರವಾರ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಆಚರಿಸಿ ಗಮನ ಸೆಳೆಯಿತು. ಪಟ್ಟಣದ 3ನೇ ವಾರ್ಡ್ ನಿವಾಸಿ ಕಾಸಿಂಪೀರ್ ಹಾಗೂ ಆತನ ಕುಟುಂಬ ಸದಸ್ಯರು ಅಂಗಡಿ ಸಿದ್ದಣ್ಣ ಅವರ ತೋಟದಲ್ಲಿನ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಮೂಲತಃ ನಾವು ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದವಾರಾಗಿದ್ದು, ಸದ್ಯ ಪಟ್ಟಣದಲ್ಲಿ ವಾಸವಾಗಿದ್ದೇವೆ. ಈ ಹಿಂದೆ ಹಳ್ಳಿಯ ನಮ್ಮ ಮನೆ ಮುಂದೆಯೇ ಹುತ್ತ ಹಾಗೂ ನಾಗರಕಲ್ಲುಗಳಿದ್ದವು. ಹೀಗಾಗಿ ನಮ್ಮ ತಾತನ ಕಾಲದಿಂದಲೂ ನಾಗರ ಪಂಚಮಿ ಆಚರಿಸಲಾಗುತ್ತಿದೆ. ಅದರಂತೆ ನಾವು ನಮ್ಮ ವಂಶಸ್ಥರು ಇಂದಿಗೂ ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಕಾಸಿಂಪೀರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts