More

    ವಿದ್ಯಾರ್ಥಿಗಳಿಗೆ ಕೊಡಲಿ ಮೌಲ್ಯ, ಸಂಸ್ಕಾರ; ಕೂಡ್ಲಿಗಿ ಶಾಸಕ ಶಾಸಕ ಎನ್.ವೈ.ಗೋಪಾಲಕೃಷ್ಣ ಕಿವಿಮಾತು

    ಕೂಡ್ಲಿಗಿ: ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣದ ಜತೆ ಮೌಲ್ಯಯುತ ಸಂಸ್ಕಾರವನ್ನು ಕಲಿಸಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ಪಟ್ಟಣದ ಜ್ಞಾನಭಾರತಿ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು. ಜಾಗತಿಕ ಬದಲಾವಣೆಗಳಲ್ಲಿ ವಿಧ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನಾವು ಕಲ್ಪಿಸುತ್ತಿದ್ದೇವೆ. ಆದರೆ ಸಂಸ್ಕಾರದ ಕೊರತೆ ಮಕ್ಕಳಲ್ಲಿ ನಾವು ನೋಡುತ್ತಿದ್ದೇವೆ.ಇದಕ್ಕೆ ಪಾಲಕರು ಸಹ ಹೊರತಲ್ಲ. ಜನನಿ ತಾನೇ ಮೊದಲ ಗುರು ಎನ್ನುವಂತೆ, ತಾಯಂದಿರು ಮನೆಯಲ್ಲಿ ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಶಿಕ್ಷಕರು ಸಹ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿರುವುದು ಪ್ರಸಕ್ತ ವರ್ಷದ ಫಲಿತಾಂಶಗಳನ್ನು ನೋಡಿದಾಗ ತಿಳಿಯುತ್ತಿದೆ. ಆದ್ದರಿಂದ ಶಿಕ್ಷಕರಿಗೆ ತರಗತಿ ಕೊಠಡಿಗಳ ಕೊರತೆ ಎದುರಾಗಬಾರದು ಎಂದು ಸುಮಾರು ಐದು ನೂರಕ್ಕೂ ಹೆಚ್ಚು ಕೊಠಡಿಗಳು, ಬಿಸಿ ಊಟದ ಕೋಣೆ, ಶಾಲಾ ಕಾಂಪೌಂಡ್, ವಿಧ್ಯಾರ್ಥಿನಿಯರ ಶೌಚಗೃಹ ಮೊದಲಾದ ಸೌಲಭ್ಯಗಳನ್ನು ನೀಡಲಾಗಿದೆ. ಐದು ವ?ರ್ಗಳಲ್ಲಿ 200 ಕೋಟಿ ರೂ. ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ ಎಂದರು.

    ಏಕಲವ್ಯ ಶಾಲೆಗೆ ಅನುದಾನ ನೀಡಿದ್ದು, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೂ ನಿವೇಶನದ ಜತೆ ಸುಸಜ್ಜಿತ ಕಟ್ಟಡಕ್ಕೂ ಅವಶ್ಯ ಅನುದಾನ ನೀಡಲಾಗಿದೆ. ಕಾಮಾಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಶಿಕ್ಷಕರ ಶೈಕ್ಷಣಿಕ ತರಬೇತಿ ಚಟುವಟಿಕೆಗಳನ್ನು ಹೆಚ್ಚಿಸಲು ಸುಸಜ್ಜಿತ ಭವನ ನಿರ್ಮಾಣಕ್ಕೆ ಕೋರಲಾಗಿದೆ. ಅವಶ್ಯ ಅನುದಾನ ನೀಡಿ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ, ಇದೇ ವರ್ಷ ನಿವೃತ್ತರಾದ ಶಿಕ್ಷಕರನ್ನು ಸನ್ಮಾನ ಮಾಡಲಾಯಿತು. ಟಿಎಎಸ್ ಪ್ರದೀಪ್, ಎಸ್.ಪಿ.ಪ್ರಕಾಶ್, ಎಸ್.ದುರುಗೇಶ್, ಪಾಪನಾಯಕ, ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ವೈ.ರವಿಕುಮಾರ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವಿ.ಗೀತಾ, ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಕೊಟ್ರೇಶ್‌ಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ, ಕೆ.ಎಸ್.ವೀರೇಶ್, ಜಿನಾಬಿ, ಬಿಸಿಯೂಟ ಸಹಾಯಕ ನಿರ್ದೇಶಕ ಆಂಜನೇಯ,ಪದಾದಿಕಾರಿಗಳಾದ ಎಚ್.ಇಂದಿರಾ, ಗೀತಾಬಾಪ್ರಿ, ಶಶಿಧರ, ಪಾಂಡುರಂಗ, ಹನುಮಂತಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts