More

    ಮುಖ್ಯವಾಹಿನಿಗೆ ಬರಲಿ ಕಾಡುಗೊಲ್ಲರು; ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಸಲಹೆ

    ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ

    ಕೂಡ್ಲಿಗಿ: ಕಾಡುಗೊಲ್ಲರು ಸಮಾಜದ ಮುಖ್ಯವಾಹಿನಿಗೆ ಬರಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಭಾನುವಾರ ರಾಜ್ಯ ಕಾಡುಗೊಲ್ಲರ ಸಂಘ ಹಮ್ಮಿಕೊಂಡ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು. ಕ್ಷೇತ್ರದಲ್ಲಿ ಸುಮಾರು 30 ಗೊಲ್ಲರಹಟ್ಟಿಗಳಿವೆ. ಮೂಲ ಸೌಕರ್ಯ ಕಲ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಸರ್ಕಾರದ ಹಿಂದುಳಿದ ವರ್ಗಗಳಡಿ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಸುಮಾರು 2400 ಮನೆಗಳನ್ನು ನೀಡಿದೆ. ಇಂದು ಸಾಂಕೇತಿಕವಾಗಿ ಇಬ್ಬರು ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಹಟ್ಟಿಗೂ ಭೇಟಿ ನೀಡಿ ಮೂಲ ಸೌಕರ್ಯ ಒದಗಿಸುವೆ ಎಂದು ಭರವಸೆ ನೀಡಿದರು.

    ಕಾಡುಗೊಲ್ಲ ಜನಾಂಗದವರು ಒಪ್ಪುವುದಾದರೆ ಕ್ಷೇತ್ರದ ಪ್ರತಿ ಹಟ್ಟಿಗೂ ಸಮುದಾಯ ಭವನದಂತೆ ಭವನ ನಿರ್ಮಾಣ ಮಾಡಿಕೊಡಲಾಗುವುದು. ಎಲ್ಲ ಹಟ್ಟಿಗಳನ್ನು ಗುಡಿಸಲು ಮುಕ್ತ ಮಾಡಲು ಸರ್ಕಾರದ ವಿವಿಧ ಯೋಜನೆಗಳಡಿ 1500 ಮನೆಗಳನ್ನು ಕಾಡುಗೊಲ್ಲರಿಗೆ ನೀಡಲಾಗುವುದು ಎಂದರು.

    ಪ್ರಮುಖರಾದ ಜಿ.ಗೋಣಿಬಸಪ್ಪ, ತಾಲೂಕು ಅಧ್ಯಕ್ಷ ಜಿ.ಎಸ್.ದೊಡ್ಡಪ್ಪ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಕೆ.ಎಚ್.ವೀರನಗೌಡ, ಸೂರ್ಯಪಾಪಣ್ಣ, ಬಂಗಾರು ಹನುಮಂತು, ಲೋಕೇಶ್ ನಾಯಕ, ಕೆ.ಎಂ.ತಿಪ್ಪೇಸ್ವಾಮಿ, ಬಿ.ಭೀಮೇಶ್, ಪಿ.ಚಂದ್ರು, ಕೋಡಿಹಳ್ಳಿ ಭೀಮಣ್ಣ, ಎಸ್.ಪಿ.ಪ್ರಕಾಶ್, ಮಂಜುನಾಥ, ಎಸ್.ದುರುಗೇಶ್ ಇತರರು ಇದ್ದರು.

    ಕಾರ್ಯಕ್ರಮಕ್ಕೂ ಮೊದಲು ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಕಾಡುಗೊಲ್ಲರ ಸಂಸ್ಕೃತಿಯ ಕೋಲಾಟ ಹಾಗೂ ಕಲಾತಂಡಗಳ ಮೆರವಣಿಗೆ ನಡೆಯಿತು. ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts