More

    ಮಾರಪ್ಪ ಸೂಲದಹಳ್ಳಿ ಗ್ರಾಪಂ ಅಧ್ಯಕ್ಷ

    ಕೂಡ್ಲಿಗಿ: ತಾಲೂಕಿನ ಸೂಲದಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕ್ಷೇತ್ರ-2ರ ಸದಸ್ಯ ಮಾರಪ್ಪ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

    ಬೆಳಗ್ಗೆ 10.40ಕ್ಕೆ ಗ್ರಾಪಂ ಕಚೇರಿಗೆ ಬಂದ ಮಾರಪ್ಪ, ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು. ಸದಸ್ಯೆ ಕರಿಬಸಮ್ಮ ಸೂಚಕರಾಗಿದ್ದರು. ಬೇರೆ ಯಾರೂ ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಮಧ್ಯಾಹ್ನ 1 ಗಂಟೆಗೆ ಮಾರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. 18 ಗ್ರಾಪಂ ಸದಸ್ಯರು ಹಾಜರಿದ್ದರೆ, ಒಬ್ಬ ಸದಸ್ಯೆ ಗೈರಾಗಿದ್ದರು. ಈ ಮೊದಲಿದ್ದ ಸಿದ್ದಬಸಪ್ಪ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು.

    ತಾಪಂ ಇಒ ಜಿ.ಎಂ.ಬಸಣ್ಣ, ಪಿಡಿಒ ಭರತ ಕುಮಾರ, ಚುನಾವಣಾ ವಿಭಾಗದ ಶಿರೇಸ್ತೇದಾರ್ ಈಶಪ್ಪ, ಪಿ.ಶಿವಕುಮಾರ್‌ಗೌಡ, ಜಿ.ವಾಸುದೇವ ಚುನಾವಣೆ ಪ್ರಕ್ರಿಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಚನ್ನಪ್ಪ, ಬಿಜೆಪಿ ಮುಖಂಡರಾದ ಸೂರ್ಯಪಾಪಣ್ಣ, ಎಚ್.ರಾಜಪ್ಪ, ವಿ. ಕಲ್ಲೇಶ, ಎಸ್.ಮಲಿಯಪ್ಪ, ಎಸ್.ಬಸವರಾಜ, ಎನ್.ವೃಷಭೇಂದ್ರಪ್ಪ , ವಿ.ಗಪ್ಪಣ್ಣ, ಪಾಪನಾಯಕ, ಪಾಲಯ್ಯನಕೋಟೆ ಕಲ್ಲೇಶ, ಮಲ್ಲೇಶಿ, ಎನ್.ಜಂಬಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts