More

    ಜಾನುವಾರು ಸಂತೆ ಮೈದಾನಕ್ಕೆ ಮೂಲ ಸೌಕರ್ಯ ಶೀಘ್ರ ಒದಗಿಸುವುದಾಗಿ ಹೇಳಿದ ಶಾಸಕ ಎನ್.ವೈ.ಗೋಪಾಲಕೃಷ್ಣ

    ಕೂಡ್ಲಿಗಿ: ಪಟ್ಟಣದ ಕೊತ್ತಲಾಂಜನೇಯ ಸಂತೆ ಮೈದಾನದಲ್ಲಿ ಜಾನುವಾರುಗಳ ಸಂತೆಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಬುಧವಾರ ಚಾಲನೆ ನೀಡಿದರು.

    ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಈ ಹಿಂದೆ ಈ ಭಾಗದ ರೈತರು ವ್ಯವಹರಿಸಲು ಬೆಂಗಳೂರು, ಮೈಸೂರು, ತುಮಕೂರಿಗೆ ಹೋಗುತ್ತಿದ್ದರು. ಇದನ್ನು ತಪ್ಪಿಸಲು ರೈತರಿಗೆ ಅನುಕೂಲವಾಗಲೆಂದು ಜಾನುವಾರುಗಳ ಸಂತೆ ಪ್ರಾರಂಭಿಸಲಾಗಿದೆ. ಇದರ ಸದುಪಯೋಗ ರೈತರು ಸೇರಿ ವ್ಯಾಪಾರಸ್ಥರು ಪಡೆದುಕೊಳ್ಳಬೇಕು. ಸಂತೆಗೆ ಮೂಲಸೌಕರ್ಯ ಕಲ್ಪಿಸಲು ಪಪಂ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲು ಸಂತೆ ಮೈದಾನಕ್ಕೆ ಸಿಸಿ ರಸ್ತೆ ನಿರ್ಮಾಣ ಮಾಡುವುದಲ್ಲದೆ ರೈತರಿಗೆ ತಂಗಲು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಿಂದ 150ಕ್ಕೂ ಹೆಚ್ಚು ಜೋಡಿ ಎತ್ತುಗಳ ಮೆರವಣಿಗೆ ಮಾಡಲಾಯಿತು. ಸಂತೆಯಲ್ಲಿ ಕೋಳಿ, ಕುರಿ, ಆಕಳು, ಎಮ್ಮೆ ಇತರ ಜಾನುವಾರುಗಳ ವ್ಯಾಪಾರ ನಡೆಯಿತು. ತಹಸೀಲ್ದಾರ್ ಎಸ್.ಮಹಾಬಲೇಶ್ವರ, ಪಪಂ ಅಧ್ಯಕ್ಷೆ ಶಾರದಾಬಾಯಿ, ಉಪಾಧ್ಯಕ್ಷೆ ಊರಮ್ಮ, ಪಪಂ ಸದಸ್ಯರು, ಮುಖ್ಯಾಧಿಕಾರಿ ಸೇರಿ ಮುಖಂಡರು, ರೈತರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts