More

    ಬಿಜೆಪಿಯಲ್ಲಿ ಸ್ಥಳೀಯರಿಗೆ ನಿರ್ಲಕ್ಷ್ಯ -ಹೊರಗಿನವರಿಗೆ ಟಿಕೆಟ್

    ಕಾನಹೊಸಹಳ್ಳಿ: ಸಮೀಪದ ಸಕಲಾಪುರದಹಟ್ಟಿ ಹೊರವಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಟಿಕೆಟ್ ವಂಚಿತರು ಅಸಮಾಧಾನ ವ್ಯಕ್ತಪಡಿಸಿದರು.

    ಲೊಕೇಶ್ ನಾಯಕಗೆ ಟಿಕೆಟ್ ಘೋಷಣೆ

    ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಆರು ದಿನಗಳ ಹಿಂದೆ ಬಿಜೆಪಿ ಸೇರ್ಪಡೆಯಾದ ಲೊಕೇಶ್ ನಾಯಕಗೆ ಟಿಕೆಟ್ ಘೋಷಣೆ ಮಾಡಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಅಲ್ಲದೆ ಸ್ಥಳೀಯ ನಾಲ್ವರು ಆಂಕಾಕ್ಷಿಗಳ ಪೈಕಿ ಒಬ್ಬರಿಗೆ ಪಕ್ಷ ಟಿಕೆಟ್ ನೀಡಿದ್ದರೂ ನಾವು ಒಮ್ಮತದಿಂದ ಬೆಂಬಲಿಸುತ್ತಿದ್ದೆವು. ಇನ್ನೂ ಬಿ ಫಾರಂ ನೀಡಿಲ್ಲದ ಕಾರಣ ಸಮಯವಿದ್ದು ವರಿಷ್ಟರು ಪರಿಶೀಲನೆ ನಡೆಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

    ಇದನ್ನೂ ಓದಿ: ಬಂಡಾಯ ತಣಿಸುವ ಸವಾಲು; ಬಿಜೆಪಿ ಟಿಕೆಟ್​ ವಂಚಿತರ ಕಣ್ಣೀರು, ರೋಷಾವೇಶ

    ಕೋಡಿಹಳ್ಳಿ ಭೀಮಣ್ಣ, ಬಂಗಾರು ಹನುಮಂತು, ಸೂರ್ಯಪಾಪಣ್ಣ, ಎಸ್.ಪಿ.ಪ್ರಕಾಶ್ ಅವರಲ್ಲಿ ಯಾರಿಗೇ ಟಿಕೆಟ್ ನೀಡಿದ್ದರೂ ಒಮ್ಮತ್ತದಿಂದ ಬೆಂಬಲ ನೀಡುತ್ತೇವೆ. ಈ ಕುರಿತು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ಟಿಕೆಟ್ ವಂಚಿತರು ಹೇಳೀದರು.

    ಆರ್‌ಎಸ್‌ಎಸ್, ಸಾವರ್ಕರ್ ಅವರನ್ನು ನಿಂದಿಸುತ್ತಿದ್ದವರಿಗೆ ಟಿಕೆಟ್

    ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ ಮಾತನಾಡಿ, ಇಷ್ಟು ದಿನಗಳ ಕಾಲ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮತ್ತು ಸಾವರ್ಕರ್ ಅವರನ್ನು ನಿಂದಿಸುತ್ತಿದ್ದವರಿಗೆ ಬಿಜೆಪಿ ಟಿಕೆಟ್ ಘೋಷಿಸುವ ಮೂಲಕ ಪ್ರಾಮಾಣಿಕರನ್ನು ನಿರ್ಲಕ್ಷಿಸಿದೆ ಎಂದು ದೂರಿದರು.

    ಟಿಕೆಟ್ ವಂಚಿತರಾದ ಕೋಡಿಹಳ್ಳಿ ಭೀಮಪ್ಪ, ಎಸ್.ಪಿ.ಪ್ರಕಾಶ್, ಕಾರ್ಯಕರ್ತರಾದ ಬೆಳಕಟ್ಟೆ ಕಲ್ಲೇಶ್‌ಗೌಡ್ರು, ಹುಡೆಂ ಪಾಪನಾಯಕ್, ಕಾನಹೊಸಹಳ್ಳಿಯ ಕುಲುಮೆಹಟ್ಟಿ ವೆಂಕಟೇಶ್, ಕೆ.ಎಸ್.ವಿಶ್ವನಾಥ, ಹನುಮಜ್ಜಿ ನಾಗೇಶ್, ಕೂಡ್ಲಿಗಿ ಪಪಂ ಸದಸ್ಯ ಕೆ.ಎಚ್.ಎಂ.ಸಚಿನ್‌ಕುಮಾರ್, ವೇಣುಗೋಪಾಲ್, ಕೆಂಚಮಲ್ಲನಹಳ್ಳಿ ಬಸವರಾಜ್, ಮಂಜುನಾಥ, ದಿನೇಶ್, ಹುಲಿಕೆರೆ ಮಾರಪ್ಪ, ಭದ್ರಪ್ಪ, ನಾಗರಾಜ್‌ಗೌಡ ಇದ್ದರು.

    ಶ್ರೀರಾಮುಲು ಅವರು ಬಹಳ ಎತ್ತರಕ್ಕೆ ಬೆಳೆದಿದ್ದರೆ. ಅವರೊಂದಿಗೆ ನಮ್ಮಂತಹ ಯುವಕರನ್ನು ಕೂಡ ಬೆಳೆಸಬೇಕಿತ್ತು. ಆದರೆ, ನಮ್ಮನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ನಾಲ್ವರು ಆಂಕಾಕ್ಷಿಗಳಿಗೆ ಟಿಕೆಟ್ ಕೈ ತಪ್ಪಲು ಅವರೇ ಕಾರಣ.
    | ಬಂಗಾರು ಹನುಮಂತು, ಟಿಕೆಟ್ ವಂಚಿತ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts